ADVERTISEMENT

ಲಂಕಾ ಪ್ರೀಮಿಯರ್‌ ಲೀಗ್‌ ಮುಂದೂಡಿಕೆ

ಪಿಟಿಐ
Published 11 ಆಗಸ್ಟ್ 2020, 14:14 IST
Last Updated 11 ಆಗಸ್ಟ್ 2020, 14:14 IST
ಶ್ರೀಲಂಕಾ ಕ್ರಿಕೆಟ್‌ ಲೋಗೊ
ಶ್ರೀಲಂಕಾ ಕ್ರಿಕೆಟ್‌ ಲೋಗೊ   

ಕೊಲಂಬೊ: ವಿದೇಶಿ ಆಟಗಾರರ ಅಲಭ್ಯತೆಯ ಹಿನ್ನೆಲೆಯಲ್ಲಿ ಲಂಕಾ ಪ್ರೀಮಿಯರ್‌ ಲೀಗ್‌ ಟೂರ್ನಿಯನ್ನು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಮುಂದೂಡಿದೆ. ದ್ವೀಪರಾಷ್ಟ್ರದಲ್ಲಿ ಕೋವಿಡ್‌ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವುದರಿಂದ ಅನ್ಯದೇಶದಿಂದ ಆಗಮಿಸುವ ಆಟಗಾರರು 14 ದಿನಗಳ ಕ್ವಾರಂಟೈನ್‌ಗೆ ಒಳಗಾಗಬೇಕಾಗಿತ್ತು. ಹೀಗಾಗಿ ಆ ಆಟಗಾರರು ಟೂರ್ನಿಯಿಂದ ಹಿಂದೆ ಸರಿಯುವ ಸಾಧ್ಯತೆಯಿದೆ.

ಮೊದಲ ಬಾರಿ ನಿಗದಿಯಾಗಿರುವ ಈ ಟ್ವೆಂಟಿ–20 ಲೀಗ್‌ ಆಗಸ್ಟ್‌ 28ರಂದು ಆರಂಭವಾಗಬೇಕಿತ್ತು. ಆದರೆ ಇದಕ್ಕೆ ಅಲ್ಲಿಯ ಸರ್ಕಾರ ಹಾಗೂ ಆರೋಗ್ಯ ಸಚಿವಾಲಯದ ಅನುಮತಿ ಅಗತ್ಯವಿತ್ತು. ಆದರೆ 14 ದಿನಗಳ ಕ್ವಾರಂಟೈನ್‌ ಇರಬೇಕೆಂಬ ನಿಯಮವೇ ವಿದೇಶಿ ಆಟಗಾರರ ವಿಷಯದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ.

‘ದೇಶದ ಆರೋಗ್ಯಾಧಿಕಾರಿಗಳೊಂದಿಗೆ ನಾವು ಚರ್ಚೆ ನಡೆಸಿದ್ದೇವೆ. ವಿದೇಶಿ ಆಟಗಾರರಿಗೆ 14 ದಿನಗಳ ಕ್ವಾರಂಟೈನ್‌ಕಡ್ಡಾಯವಾಗಿದೆ. ಹೀಗಾಗಿ ಈ ತಿಂಗಳ ಅಂತ್ಯದಲ್ಲಿ ಟೂರ್ನಿಯನ್ನು ನಡೆಸುವುದು ಕಷ್ಟ‘ ಎಂದು ಎಸ್‌ಎಲ್‌ಸಿ ಅಧ್ಯಕ್ಷ ಶಮ್ಮಿ ಸಿಲ್ವಾ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ADVERTISEMENT

‘ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌)‌ ಮುಗಿದ ಬಳಿಕ ನವೆಂಬರ್‌ ಮಧ್ಯಂತರದಲ್ಲಿ ಟೂರ್ನಿಯನ್ನು ನಡೆಸುವೆವು‘ ಎಂದು ಸಿಲ್ವಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ ಟೂರ್ನಿಯು ಸೆಪ್ಟೆಂಬರ್‌ 19ರಿಂದ ನವೆಂಬರ್‌ 10ರವರೆಗೆ ಯುಎಇಯಲ್ಲಿ ನಿಗದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.