ADVERTISEMENT

ಕ್ರಿಕೆಟಿಗರೊಂದಿಗೆ ‘ಚಿನ್ನದ ಮೀನು’

ಕ್ರಿಕೆಟ್ ಅಂಗಳದಲ್ಲಿ ಕಾಲ ಕಳೆದ ಈಜುಪಟು ಮೈಕೆಲ್ ಪೆಲ್ಪ್ಸ್‌

ಪಿಟಿಐ
Published 28 ಮಾರ್ಚ್ 2019, 19:59 IST
Last Updated 28 ಮಾರ್ಚ್ 2019, 19:59 IST
ಒಲಿಂಪಿಯನ್ ಈಜುಪಟು ಮೈಕೆಲ್ ಪೆಲ್ಪ್ಸ್‌ ಅವರಿಗೆ ಕ್ರಿಕೆಟ್‌ ಹೇಳಿಕೊಡುತ್ತಿರುವ ಡೆಲ್ಲಿ ಕ್ಯಾಪಿಟಲ್ ತಂಡದ ರಿಷಭ್ ಪಂತ್ –ಪಿಟಿಐ ಚಿತ್ರ
ಒಲಿಂಪಿಯನ್ ಈಜುಪಟು ಮೈಕೆಲ್ ಪೆಲ್ಪ್ಸ್‌ ಅವರಿಗೆ ಕ್ರಿಕೆಟ್‌ ಹೇಳಿಕೊಡುತ್ತಿರುವ ಡೆಲ್ಲಿ ಕ್ಯಾಪಿಟಲ್ ತಂಡದ ರಿಷಭ್ ಪಂತ್ –ಪಿಟಿಐ ಚಿತ್ರ   

ನವದೆಹಲಿ: ‘ಚಿನ್ನದ ಮೀನು’ ಎಂದೇ ಖ್ಯಾತರಾದ ಒಲಿಂಪಿಯನ್ ಈಜುಪಟು, ಅಮೆರಿಕದ ಮೈಕೆಲ್ ಪೆಲ್ಪ್ಸ್‌ ಕಳೆದೆರಡು ದಿನಗಳಿಂದ ಕ್ರಿಕೆಟ್ ಅಂಗಳದಲ್ಲಿ ಕಾಲ ಕಳೆದರು.

ಒಲಿಂಪಿಕ್ಸ್‌ನ ಈಜು ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಕೆಯ ದಾಖಲೆವೀರ ಮೈಕೆಲ್ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡದ ಆಟಗಾರ ರೊಂದಿಗೆ ಕ್ರಿಕೆಟ್ ಆಡಿದರು. ಮಂಗಳ ವಾರ ಕೋಟ್ಲಾದಲ್ಲಿ ನಡೆದ ಐಪಿಎಲ್ ಪಂದ್ಯವನ್ನೂ ವೀಕ್ಷಿಸಿದರು.

‘ಕ್ರಿಕೆಟ್ ಆಡಿದ್ದು ಇದೊಂದು ಒಳ್ಳೆಯ ಅನುಭವ. ಪ್ರೇಕ್ಷಕರ ಉತ್ಸಾಹ, ಅಬ್ಬರವನ್ನು ನೋಡುವುದೇ ಚೆಂದ. ಬ್ಯಾಟ್ಸ್‌ಮನ್‌ಗಳು ಸಿಕ್ಸರ್‌ಗಳನ್ನು ಹೊಡೆದಿದ್ದನ್ನು ನೋಡಿ ಆನಂದಿಸಿದೆ’ ಎಂದು ಪೆಲ್ಪ್ಸ್‌ ಸುದ್ದಿಗಾರರಿಗೆ ಹೇಳಿದರು.

ADVERTISEMENT

‘ಇವತ್ತು ಡೆಲ್ಲಿ ತಂಡದ ಆಟಗಾರರಿಂದ ಬಹಳಷ್ಟು ಹೊಸ ಅಂಶಗಳನ್ನು ಕಲಿತೆ. ಬ್ಯಾಟ್ ಹಿಡಿಯುವುದನ್ನೂ ಕಲಿಸಿದರು. ಮುಂದಿನ ಬಾರಿ ಭಾರತಕ್ಕೆ ಬಂದಾಗ ಕ್ರಿಕೆಟ್ ಆಡಲು ಏನೇನು ಆಭ್ಯಾಸ ಮಾಡಬೇಕು ಎಂಬ ಟಿಪ್ಸ್‌ ಕೂಡ ನೀಡಿದರು’ ಎಂದು ಮೈಕೆಲ್ ಸಂತಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.