ADVERTISEMENT

ಮಧ್ಯಪ್ರದೇಶದ ಬರ್ನಲ್‌ ಶತಕ

ಕೂಚ್‌ ಬೆಹರ್‌ ಟ್ರೋಫಿ ಕ್ರಿಕೆಟ್: ರಾಜ್ಯದ ಚಿನ್ಮಯ್‌ಗೆ ಎರಡು ವಿಕೆಟ್‌

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 18:03 IST
Last Updated 21 ಜನವರಿ 2019, 18:03 IST
ದೇವ್ ಬರ್ನಲ್
ದೇವ್ ಬರ್ನಲ್   

ಬೆಳಗಾವಿ: ದೇವ್‌ ಬರ್ನಲ್ ಜವಾಬ್ದಾರಿಯುತ ಶತಕದ (ಬ್ಯಾಟಿಂಗ್‌105, 265 ಎಸೆತ, 11 ಬೌಂಡರಿ) ಬಲದಿಂದ ಮಧ್ಯಪ್ರದೇಶ ತಂಡ 19 ವರ್ಷದೊಳಗಿ ನವರ ಕೂಚ್‌ ಬೆಹರ್‌ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಕರ್ನಾಟಕ ಎದುರಿನ ಪಂದ್ಯದಲ್ಲಿ ಉತ್ತಮ ಮೊತ್ತದತ್ತ ಸಾಗಿದೆ.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ನಾಲ್ಕು ದಿನಗಳ ಪಂದ್ಯದಲ್ಲಿ ಟಾಸ್‌ ಜಯಿಸಿದ ಮಧ್ಯಪ್ರದೇಶ ಮೊದಲ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ ಆರು ವಿಕೆಟ್‌ ಕಳೆದುಕೊಂಡು 230 ರನ್‌ ಗಳಿಸಿತು. ಆರಂಭದಲ್ಲಿ ಪ್ರಮುಖ ವಿಕೆಟ್‌ ಕಳೆದುಕೊಂಡುಸಂಕಷ್ಟದಲ್ಲಿದ್ದ ತಂಡಕ್ಕೆಬರ್ನಲ್‌ ಆಸರೆಯಾದರು.

ಬರ್ನಲ್‌ಗೆ ಉತ್ತಮ ಬೆಂಬಲ ನೀಡಿದಇರ್ಫಾನ್ ಅಲಿ (62) ಅರ್ಧಶತಕ ಗಳಿಸಿ ತಂಡದ ಚೇತರಿಕೆಗೆ ನೆರವಾದರು. ಈ ಜೋಡಿ ಮೂರನೇ ವಿಕೆಟ್‌ಗೆ 94 ರನ್ ಕಲೆಹಾಕಿತು.

ADVERTISEMENT

126 ಎಸೆತಗಳನ್ನು ಎದುರಿಸಿದ ಇರ್ಫಾನ್‌ ಎಂಟು ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಿಡಿಸಿದರು.

ಉಭಯ ತಂಡಗಳಿಗೂ ಇದು ಈ ಬಾರಿಯ ಟೂರ್ನಿಯಕೊನೆಯ ಲೀಗ್‌ ಪಂದ್ಯ.

ನಾಕೌಟ್‌ ಪ್ರವೇಶಿಸಬೇಕಾದರೆ ಕರ್ನಾಟಕ ತಂಡ ಇನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಸಾಧಿಸಬೇಕು ಅಥವಾ ಗೆಲುವು ಪಡೆಯಬೇಕಿದೆ. ರಾಜ್ಯ ತಂಡದ ಎಂ.ಎ. ಚಿನ್ಮಯ್‌ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರು:ಮಧ್ಯಪ್ರದೇಶ ಮೊದಲ ಇನಿಂಗ್ಸ್‌ 90 ಓವರ್‌ಗಳಲ್ಲಿ ಆರು ವಿಕೆಟ್‌ಗೆ 230 (ದೇವ್‌ ಬರ್ನಲ್‌ ಬ್ಯಾಟಿಂಗ್‌ 105, ಇರ್ಫಾನ್‌ ಅಲಿ 62, ರಿಷಬ್‌ ಚೌಹಾಣ್‌ 17; ಎಂ. ವೆಂಕಟೇಶ್‌ 38ಕ್ಕೆ1, ಶುಭಾಂಗ್‌ ಹೆಗ್ಡೆ 64ಕ್ಕೆ1, ವಿದ್ಯಾಧರ ಪಾಟೀಲ 31ಕ್ಕೆ1, ದೇವದತ್‌ ಪಡಿಕ್ಕಲ್‌ 24ಕ್ಕೆ1, ಎನ್‌.ಎ. ಚಿನ್ಮಯ್‌ 23ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.