ಕ್ರಿಕೆಟ್
(ಸಾಂಕೇತಿಕ ಚಿತ್ರ)
ಬೆಂಗಳೂರು: ರಚಿತಾ ಹತ್ವಾರ್ ಅರ್ಧ ಶತಕ ಹೊಡೆದ ಬಳಿಕ ಬೌಲರ್‌ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಣಿ ಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು.
ಆಲೂರಿನ ಕೆಎಸ್‌ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಆಡಿದ ಮೈಸೂರು ತಂಡ 20 ಓವರುಗಳಲ್ಲಿ 6 ವಿಕೆಟ್‌ಗೆ 110 ರನ್ ಗಳಿಸಿತು. ರಚಿತಾ 43 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿಗಳಿದ್ದ 57 ರನ್ ಹೊಡೆದರು. ತಂಡ ಬೌಲರ್‌ಗಳು ನಂತರ ಕಲ್ಯಾಣ ಬೆಂಗಳೂರು ಬ್ಲಾಸ್ಟರ್ಸ್ ತಂಡ 9 ವಿಕೆಟ್‌ಗೆ 98 ರನ್‌ಗಳಿಗೆ ಕಟ್ಟಿಹಾಕಿದರು. ಕೆ.ಕೆ.ಕಶ್ವಿ (42 ಎಸೆತಗಳಲ್ಲಿ 48) ಅವರ ಹೋರಾಟ ಫಲಪ್ರದವಾಗಲಿಲ್ಲ.
ದಿನದ ಎರಡನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ಇನ್ನೊಂದು ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಶಿವಮೊಗ್ಗ ಲಯನೆಸ್ ತಂಡವನ್ನು ಸೋಲಿಸಿತು. ಇಂಚರಾ ಸಿ.ಯು 46 ಎಸೆತಗಳಲ್ಲಿ ಅಜೇಯ 51 ರನ್ ಹೊಡೆದು ತಂಡ 15 ಎಸೆತಗಳಿರುವಂತೆ ಗುರಿತಲುಪಲು ನೆರವಾದರು.
ಸಂಕ್ಷಿಪ್ತ ಸ್ಕೋರು
ಮೈಸೂರು ವಾರಿಯರ್ಸ್: 20 ಓವರುಗಳಲ್ಲಿ 6 ವಿಕೆಟ್‌ಗೆ 110 (ರಚಿತಾ ಹತ್ವಾರ್ 57, ಸಿಲ್ಕಿನ್ ಜೀತುಭಾಯಿ ಪಟೇಲ್ 23; ಪುಷ್ಪಾ ಕಿರೆಸೂರ್ 21ಕ್ಕೆ3)
ಕಲ್ಯಾಣ ಬೆಂಗಳೂರು ಬ್ಲಾಸ್ಟರ್ಸ್: 20 ಓವರುಗಳಲ್ಲಿ 9 ವಿಕೆಟ್‌ಗೆ 98 (ಕಂದಿಕೊಪ್ಪ ಕಶ್ವಿ 48; ಅಹ್ಲಮ್ ಎಫ್. ಸೈಯದ್ 10ಕ್ಕೆ2, ವಂದಿತಾ ಕೃಷ್ಣರಾವ್ 21ಕ್ಕೆ2, ದೀಕ್ಷಾ ಜೆ. 17ಕ್ಕೆ3)
ಶಿವಮೊಗ್ಗ ಲಯನೆಸ್: 20 ಓವರುಗಳಲ್ಲಿ 6 ವಿಕೆಟ್‌ಗೆ 113 (ರೋಶಿನಿ ಕಿರಣ್ 31, ಲಾವಣ್ಯ ಚಲನಾ 39; ಲಿಯಾಂಕಾ ಶೆಟ್ಟಿ 22ಕ್ಕೆ2)
ಮಂಗಳೂರು ಡ್ರ್ಯಾಗನ್ಸ್: 17.3 ಓವರುಗಳಲ್ಲಿ 4 ವಿಕೆಟ್‌ಗೆ 114 (ಇಂಚರಾ ಸಿ.ಯು. ಔಟಾಗದೇ 51, ಪ್ರತ್ಯುಷಾ ಕುಮಾರ್ 37).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.