ADVERTISEMENT

ಐಸಿಸಿ ಚುನಾವಣೆಗೆ ಸ್ಪರ್ಧಿಸಲು ಗಂಗೂಲಿಗೆ ಅವಕಾಶ ನೀಡಿ: ಪ್ರಧಾನಿಗೆ ಮಮತಾ ಮನವಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2022, 11:44 IST
Last Updated 17 ಅಕ್ಟೋಬರ್ 2022, 11:44 IST
   

ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಅವರನ್ನು ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಮಮತಾ ಬ್ಯಾನರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ಸೌರವ್ ಗಂಗೂಲಿಅಧಿಕಾರವಧಿ ಮುಗಿದಿದ್ದು ಅವರ ಸ್ಥಾನಕ್ಕೆ ಬೇರೆಯವರು ಬರುತ್ತಿದ್ದಾರೆ. ಆದರೆ ಗಂಗೂಲಿ ಅವರನ್ನು ಅನ್ಯಾಯವಾಗಿ ಹೊರಗಿಡಲಾಗಿದೆ. ಅವರಿಗೆ ಅನ್ಯಾಯವಾಗಬಾರದು ಎಂದರೆಸೌರವ್ ಗಂಗೂಲಿ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮಮತಾ ಹೇಳಿದ್ದಾರೆ.

ಗಂಗೂಲಿ ಅವರಿಗೆ ಐಸಿಸಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು. ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಕ್ಟೋಬರ್ 20 ರಂದು ನಾಮಪತ್ರ ಸಲ್ಲಿಸಬೇಕಿದೆ. ಇದಕ್ಕೆ ಪ್ರಧಾನಿಯವರು ಅವಕಾಶ ಕಲ್ಪಿಸಬೇಕು ಎಂದು ಅವರಲ್ಲಿ ಮನವಿ ಮಾಡುತ್ತೇನೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ADVERTISEMENT

ಗಂಗೂಲಿ ಭಾರತ ಕ್ರಿಕೆಟ್‌ ತಂಡದ ನಾಯಕರಾಗಿದ್ದರು. ದೇಶಕ್ಕೆ ಅವರ ಕೊಡುಗೆ ಸಾಕಷ್ಟಿದೆ. ಬಂಗಾಳದ ಹೆಮ್ಮೆ ಮಾತ್ರವಲ್ಲ, ಅವರು ಭಾರತದ ಹೆಮ್ಮೆ ಎಂದು ಮಮತಾ ಹೇಳಿದ್ದಾರೆ.

ಬಿಸಿಸಿಐಗೆ ಸೌರವ್ ಗಂಗೂಲಿ ನಂತರ ಆ ಸ್ಥಾನಕ್ಕೆ ರೋಜರ್ ಬಿನ್ನಿ ಬರುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.