ADVERTISEMENT

ಎಫ್‌ಟಿಪಿ: ಭಾರತ– ಪಾಕಿಸ್ತಾನ ಕ್ರಿಕೆಟ್ ಸರಣಿ ಇಲ್ಲ

ಐದು ವರ್ಷಗಳ ಅವಧಿಯಲ್ಲಿ 138 ಪಂದ್ಯ ಆಡಲಿರುವ ಭಾರತ ತಂಡ

ಪಿಟಿಐ
Published 17 ಆಗಸ್ಟ್ 2022, 21:18 IST
Last Updated 17 ಆಗಸ್ಟ್ 2022, 21:18 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ಭಾರತ ಪುರುಷರ ಕ್ರಿಕೆಟ್ ತಂಡವು ಮುಂದಿನ ಐದು ವರ್ಷಗಳ ಅವಧಿಯಲ್ಲಿ 141 ದ್ವಿಪಕ್ಷೀಯ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ನ (ಐಸಿಸಿ) ಫ್ಯೂಚರ್ ಟೂರ್ಸ್ ಆ್ಯಂಡ್ ಪ್ರೊಗ್ರಾಮ್‌ (ಎಫ್‌ಟಿಪಿ) ತಿಳಿಸಿದೆ.

2023ರ ಮೇನಿಂದ 2027ರ ಏಪ್ರಿಲ್‌ವರೆಗೆ ಅವಧಿಯ ಪಂದ್ಯಗಳ ಸಂಖ್ಯೆಯನ್ನು ಐಸಿಸಿ ಬುಧವಾರ ಪ್ರಕಟಿಸಿದ್ದು, ಭಾರತ ತಂಡವು 38 ಟೆಸ್ಟ್, 42 ಏಕದಿನ ಮತ್ತು 61 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಅವಧಿಯಲ್ಲಿ ರಾಜಕೀಯ ಕಾರಣಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಎದುರು ಸರಣಿ ಆಡುವುದಿಲ್ಲ.

ಏಕದಿನ ಸರಣಿಯ ಪಂದ್ಯಗಳು ಐದರ ಬದಲಾಗಿ ಮೂರಕ್ಕೆ ಸೀಮಿತಗೊಳ್ಳಬಹುದು.

ADVERTISEMENT

ಐಸಿಸಿ ಸದಸ್ಯತ್ವ ಹೊಂದಿರುವ 12 ತಂಡಗಳು ಒಟ್ಟು 777 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ. ಅದರಲ್ಲಿ 173 ಟೆಸ್ಟ್, 281 ಏಕದಿನ ಮತ್ತು 323 ಟಿ20 ಪಂದ್ಯಗಳು ಸೇರಿವೆ. ವಿಶ್ವಟೆಸ್ಪ್‌ ಚಾಂಪಿಯನ್‌ಷಿಪ್‌ನ ಎರಡು ಆವೃತ್ತಿಗಳು,ಐಸಿಸಿಯ ಹಲವು ಟೂರ್ನಿಗಳು, ದ್ವಿಪಕ್ಷೀಯ ಮತ್ತು ತ್ರಿಕೋನ ಸರಣಿಗಳು ನಡೆಯಲಿವೆ.

ಬಾರ್ಡರ್‌–ಗಾವಸ್ಕರ್‌ ಟ್ರೋಫಿಗೆ ಐದು ಪಂದ್ಯಗಳು: ಭಾರತ ತಂಡವು ಆಸ್ಟ್ರೇಲಿಯಾ ಎದುರು ಆಡುವ ಸಾಂಪ್ರದಾಯಿಕ ಬಾರ್ಡರ್‌–ಗಾವಸ್ಕರ್ ಟ್ರೋಫಿಯಲ್ಲಿ ಟೆಸ್ಟ್‌ ಸರಣಿಯಲ್ಲಿ ಇನ್ನು ನಾಲ್ಕರ ಬದಲಾಗಿ ಐದು ಪಂದ್ಯಗಳು ನಡೆಯಲಿವೆ.

65 ಪಂದ್ಯ ಆಡಲಿರುವ ಭಾರತ ಮಹಿಳಾ ಕ್ರಿಕೆಟ್‌ ತಂಡ: ಭಾರತ ಎಫ್‌ಟಿಪಿ ಪ್ರಕಾರ ಮೂರು ವರ್ಷಗಳ ಅವಧಿಯಲ್ಲಿ 65 ಪಂದ್ಯಗಳನ್ನು ಆಡಲಿದೆ.

ಈ ಎಫ್‌ಟಿಪಿ ಮೇ 2022ರಿಂದ ಏಪ್ರಿಲ್‌ 2025ರ ಅವಧಿಯನ್ನು ಹೊಂದಿದೆ. ಐಸಿಸಿ ಮಂಗಳವಾರ ಈ ಕುರಿತು ಪ್ರಕಟಿಸಿದ್ದು, ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 301 (ಏಳು ಟೆಸ್ಟ್, 135 ಏಕದಿನ ಮತ್ತು 159 ಟ್ವೆಂಟಿ–20) ಪಂದ್ಯಗಳು ಇರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.