ADVERTISEMENT

ಮಹಿಳಾ ಚಾಲೆಂಜರ್ ಟೂರ್ನಿ: ಮಿಥಾಲಿ ರಾಜ್–ಸ್ಮೃತಿ ಮಂದಾನ ಮುಖಾಮುಖಿ

ಮಹಿಳಾ ಚಾಲೆಂಜರ್ ಟೂರ್ನಿಯ ಎರಡನೇ ಪಂದ್ಯ ಇಂದು: ವೆಲೋಸಿಟಿಗೆ ಟ್ರೇಲ್ ಬ್ಲೇಜರ್ಸ್‌ ಸವಾಲು

ಪಿಟಿಐ
Published 4 ನವೆಂಬರ್ 2020, 13:38 IST
Last Updated 4 ನವೆಂಬರ್ 2020, 13:38 IST
ಸ್ಮೃತಿ ಮಂದಾನ –ಪಿಟಿಐ ಚಿತ್ರ
ಸ್ಮೃತಿ ಮಂದಾನ –ಪಿಟಿಐ ಚಿತ್ರ   

ಶಾರ್ಜಾ: ಮಿಥಾಲಿ ರಾಜ್ ನೇತೃತ್ವದ ವೆಲೋಸಿಟಿ ತಂಡ ಮಹಿಳೆಯರ ಐಪಿಎಲ್ ಎಂದೇ ಹೇಳಲಾಗುವ ಮಹಿಳಾ ಚಾಲೆಂಜರ್ ಟೂರ್ನಿಯ ಎರಡನೇ ಪಂದ್ಯದಲ್ಲಿಸ್ಮೃತಿ ಮಂದಾನ ನಾಯಕತ್ವದಟ್ರೇಲ್ ಬ್ಲೇಜರ್ಸ್‌ ಎದುರು ಗುರುವಾರ ಸೆಣಸಲಿದೆ. ಫೈನಲ್ ಕನಸು ಜೀವಂತವಾಗಿ ಉಳಿಸಿಕೊಳ್ಳಬೇಕಾದರೆಟ್ರೇಲ್ ಬ್ಲೇಜರ್ಸ್‌ಗೆ ಈ ಪಂದ್ಯದಲ್ಲಿ ಜಯ ಅನಿವಾರ್ಯ.

2018ರಲ್ಲಿ ನಡೆದ ಮೊದಲ ಆವೃತ್ತಿಯಿಂದಲೇ ಕಣದಲ್ಲಿರುವ ಟ್ರೇಲ್ ಬ್ಲೇಜರ್ಸ್‌ ತಂಡಕ್ಕೆ ಹಿಂದಿನ ಎರಡು ಆವೃತ್ತಿಗಳಲ್ಲೂ ಪ್ರಶಸ್ತಿ ಗಳಿಸಲು ಸಾಧ್ಯವಾಗಲಿಲ್ಲ. 2018ರಲ್ಲಿ ಎರಡೇ ತಂಡಗಳ ಪ್ರದರ್ಶನ ಪಂದ್ಯ ನಡೆದಿತ್ತು. ಅದರಲ್ಲಿ ಈ ತಂಡ ಸೂಪರ್‌ನೋವಾ ವಿರುದ್ಧ ಮೂರು ವಿಕೆಟ್‌ಗಳಿಂದ ಸೋತಿತ್ತು. ಕಳೆದ ಬಾರಿ ಮೊದಲ ಪಂದ್ಯದಲ್ಲಿ ಸೂಪರ್‌ ನೋವಾ ಎದುರು ಎರಡು ರನ್‌ಗಳ ರೋಚಕ ಜಯ ಸಾಧಿಸಿತ್ತು. ಆದರೆ ನಂತರ ವೆಲೋಸಿಟಿಗೆ ಮೂರು ವಿಕೆಟ್‌ಗಳಿಂದ ಮಣಿದಿತ್ತು.

ಯುವ ಆಟಗಾರ್ತಿ ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರಾಗಿದ್ದು ಗುರುವಾರದ ಪಂದ್ಯದಲ್ಲಿ ರನ್ ಮಳೆ ಸುರಿಸುವ ನಿರೀಕ್ಷೆ ಮೂಡಿಸಿದ್ದಾರೆ. ದೀಪ್ತಿ ಶರ್ಮಾ, ಪೂನಂ ರಾವತ್ ಮತ್ತು ನುಶತ್ ಪರ್ವೀನ್ ಅವರ ಬಲವೂ ಆ ತಂಡಕ್ಕೆ ಇದೆ. ಮಹಿಳಾ ಕ್ರಿಕೆಟ್‌ನ ಬೌಲಿಂಗ್‌ನಲ್ಲಿ ದಾಖಲೆಗಳ ಒಡತಿಯಾಗಿರುವ ಜೂಲನ್ ಗೊಸ್ವಾಮಿ ಈ ತಂಡದ ಬೌಲಿಂಗ್ ವಿಭಾಗದ ಶಕ್ತಿ.

ADVERTISEMENT

ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ಅವರು ಟ್ರೇಲ್ ಬ್ಲೇಜರ್ಸ್‌ ಎದುರು ಜಯ ಗಳಿಸಲು ಯಾವ ತಂತ್ರಗಳಿಗೆ ಮೊರೆ ಹೋಗುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ, ವಿಕೆಟ್ ಕೀಪರ್ ಸುಷ್ಮಾ ವರ್ಮಾ, ಶಫಾಲಿ ವರ್ಮಾ ಅವರು ಮಿಂಚುವ ಭರವಸೆಯಲ್ಲಿದ್ದಾರೆ.

ತಂಡಗಳು: ವೆಲೋಸಿಟಿ: ಮಿಥಾಲಿ ರಾಜ್ (ನಾಯಕಿ), ವೇದಾ ಕೃಷ್ಣಮೂರ್ತಿ, ಶಫಾಲಿ ವರ್ಮಾ, ಸುಷ್ಮಾ ವರ್ಮಾ (ವಿಕೆಟ್ ಕೀಪರ್), ಏಕ್ತಾ ಬಿಷ್ಠ್, ಶಿಖಾ ಪಾಂಡೆ, ದೇವಿಕಾ ವೈದ್ಯ, ದಿವ್ಯದರ್ಶಿನಿ, ಮನಾಲಿ ದಕ್ಷಿಣಿ, ಲೇಗ್ ಕಾಸ್ಪರೇಕ್, ಡ್ಯಾನಿ ವ್ಯಾಟ್, ಸೂನ್ ಲೂಜ್, ಅನಘಾ ದೇಶಪಾಂಡೆ, ಮೇಘನಾ ಸಿಂಗ್, ಜಹನಾರ ಆಲಂ.

ಟ್ರೇಲ್ ಬ್ಲೇಜರ್ಸ್‌: ಸ್ಮೃತಿ ಮಂದಾನ (ನಾಯಕಿ), ದೀಪ್ತಿ ಶರ್ಮಾ, ಪೂನಂ ರಾವತ್, ರಿಚಾ ಘೋಷ್, ದಯಾಳನ್ ಹೇಮಲತಾ, ನುಶತ್ ಪರ್ವೀನ್ (ವಿಕೆಟ್ ಕೀಪರ್‌), ರಾಜೇಶ್ವರಿ ಗಾಯಕವಾಡ್, ಹರ್ಲೀನ್ ಡಿಯಾಲ್, ಜೂಲನ್ ಗೋಸ್ವಾಮಿ, ಸಿಮ್ರನ್ ದಿಲ್ ಬಹದ್ದೂರ್, ಸಲ್ಮಾ ಖಾತುನ್, ಸೋಫಿ ಎಕ್ಲೆಸ್ಟೊನ್, ನಾಟಕನ್ ಚಂತಂ, ಕಾಶವೀ ಸುದೇಶ್, ದಿಯಾಂದ್ರ ದೊತಿನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.