ADVERTISEMENT

ಗುತ್ತಿಗೆ: ಮಿತಾಲಿಗೆ ಹಿಂಬಡ್ತಿ

ಪಿಟಿಐ
Published 16 ಜನವರಿ 2020, 19:50 IST
Last Updated 16 ಜನವರಿ 2020, 19:50 IST
ಮಿತಾಲಿ
ಮಿತಾಲಿ   

ನವದೆಹಲಿ : ಹಿರಿಯ ಆಟಗಾರ್ತಿ ಮಿತಾಲಿ ರಾಜ್‌ ಅವರು ಗುರುವಾರ ಪ್ರಕಟವಾದ ಬಿಸಿಸಿಐನ ಕೇಂದ್ರೀಯ ಗುತ್ತಿಗೆ ಆಟಗಾರ್ತಿಯರ ಪಟ್ಟಿಯಲ್ಲಿ ‘ಎ’ ದರ್ಜೆಯಿಂದ ‘ಬಿ’ಗೆ ಹಿಂಬಡ್ತಿ ಪಡೆದಿದ್ದಾರೆ. ರಾಧಾ ಯಾದವ್‌ ಮತ್ತು ತಾನಿಯಾ ಭಾಟಿಯಾ ‘ಬಿ’ ದರ್ಜೆಗೆ ಬಡ್ತಿ ಪಡೆದಿದ್ದಾರೆ.

‘ಎ’ ದರ್ಜೆಯ ಆಟಗಾರ್ತಿಯರು ₹ 50 ಲಕ್ಷ ಪಡೆಯಲಿದ್ದಾರೆ. 37 ವರ್ಷದ ಮಿತಾಲಿ ಕಳೆದ ಸೆಪ್ಟೆಂಬರ್‌ನಲ್ಲಿ ಟಿ–20 ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆದರೆ ಏಕದಿನ ತಂಡದ ನಾಯಕಿಯಾಗಿ ಮುಂದುವರಿದಿದ್ದಾರೆ. 2021ರ ವಿಶ್ವಕಪ್‌ನಲ್ಲಿ ಆಡುವ ಇರಾದೆಯಲ್ಲಿದ್ದಾರೆ.

ಟಿ–20 ತಂಡದ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌ ‘ಎ’ ದರ್ಜೆಯಲ್ಲೇ ಮುಂದುವರಿದಿದ್ದಾರೆ. ಅವರ ಜೊತೆ ಸ್ಮೃತಿ ಮಂದಾನಾ ಮತ್ತು ಪೂನಂ ಯಾದವ್‌ ಇದ್ದಾರೆ. ಈ ಗುತ್ತಿಗೆ ಅವಧಿ ಅಕ್ಟೋಬರ್‌ 2019 ರಿಂದ ಸೆಪ್ಟೆಂಬರ್‌ 2020 ರವರೆಗೆ ಇರಲಿದೆ.

ADVERTISEMENT

‘ಎ’ ದರ್ಜೆ (₹ 50 ಲಕ್ಷ): ಹರ್ಮನ್‌ ಪ್ರೀತ್‌ ಕೌರ್‌, ಸ್ಮೃತಿ ಮಂದಾನ. ಪೂನಂ ಯಾದವ್‌. ‘ಬಿ’ ದರ್ಜೆ (₹ 30 ಲಕ್ಷ): ಮಿತಾಲಿ ರಾಜ್‌, ಜೂಲನ್‌ ಗೋಸ್ವಾಮಿ, ಏಕ್ತಾ ಬಿಷ್ಟ್, ರಾಧಾ ಯಾವ್‌, ತಾನಿಯಾ ಭಾಟಿಯಾ, ಶಿಖಾ ಪಾಂಡೆ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ.

‘ಸಿ’ ದರ್ಜೆ (10 ಲಕ್ಷ): ವೇದಾ ಕೃಷ್ಣಮೂರ್ತಿ, ಪೂನಂ ರಾವುತ್‌, ಅನುಜಾ ಪಾಟೀಲ್, ಮಾನ್ಸಿ ಜೋಶಿ, ಡಿ.ಹೇಮಲತಾ, ಆರುಂಧತಿ ರೆಡ್ಡಿ, ರಾಜೇಶ್ವರಿ ಗಾಯಕವಾಡ್‌, ಪೂಜಾ ವಸ್ತ್ರಕರ್‌, ಹರ್ಲೀನ್‌ ಡಿಯೋಲ್‌, ಪ್ರಿಯಾ ಪುನಿಯಾ ಮತ್ತು ಶೆಫಾಲಿ ವರ್ಮಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.