ADVERTISEMENT

ವಾರ್ವಿಕ್‌ಶೈರ್ ತಂಡದ ಪರ ಮೊಹಮ್ಮದ್‌ ಸಿರಾಜ್ ಆಟ

ಪಿಟಿಐ
Published 18 ಆಗಸ್ಟ್ 2022, 21:50 IST
Last Updated 18 ಆಗಸ್ಟ್ 2022, 21:50 IST
ಮೊಹಮ್ಮದ್‌ ಸಿರಾಜ್‌– ಎಎಫ್‌ಪಿ ಚಿತ್ರ
ಮೊಹಮ್ಮದ್‌ ಸಿರಾಜ್‌– ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಭಾರತದ ವೇಗದ ಬೌಲರ್ ಮೊಹಮ್ಮದ್‌ ಸಿರಾಜ್‌ ಅವರು ಇಂಗ್ಲಿಷ್‌ ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ.

ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಾರ್ವಿಕ್‌ಶೈರ್‌ ತಂಡದ ಕೊನೆಯ ಮೂರು ಪಂದ್ಯಗಳಲ್ಲಿ ಅವರು ಕಣಕ್ಕಿಳಿಯಲಿದ್ದಾರೆ. ಸಿರಾಜ್ ಅವರು ಸದ್ಯ ಜಿಂಬಾಬ್ವೆ ಎದುರಿನ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ.

‘ಮೊಹಮ್ಮದ್ ಸಿರಾಜ್ ಅವರು ನಮ್ಮ ಕ್ಲಬ್‌ ಪರ ಆಡಲು ಸಹಿ ಹಾಕಿದ್ದಾರೆ. ಸೆಪ್ಟೆಂಬರ್ 12ರಂದು ಅವರು ಎಜ್‌ಬಾಸ್ಟನ್‌ಗೆ ಬರಲಿದ್ದಾರೆ‘ ಎಂದು ವಾರ್ವಿಕ್‌ಶೈರ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ಭಾರತ ರಾಷ್ಟ್ರೀಯ ತಂಡದ ಪರ ಮೂರೂ ಮಾದರಿಗಳೂ ಸೇರಿ ಒಟ್ಟು 26 ಪಂದ್ಯಗಳನ್ನು ಆಡಿರುವ ಸಿರಾಜ್‌, 56 ವಿಕೆಟ್‌ ಗಳಿಸಿದ್ದಾರೆ. ವೃತ್ತಿಜೀವನದಲ್ಲಿ ಆಡಿದ ಒಟ್ಟು 207 ಪಂದ್ಯಗಳಿಂದ 403 ವಿಕೆಟ್‌ ಅವರ ಬತ್ತಳಿಕೆ ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.