ಫುಟ್‌ಬಾಲ್
ಕೋಲ್ಕತ್ತ: ಇರಾನ್‌ನ ಸೆಪಹಾನ್ ಸ್ಪೋರ್ಟ್ಸ್ ಕ್ಲಬ್ ಎದುರು ಎಎಫ್‌ಸಿ ಚಾಂಪಿಯನ್ಸ್ ಫುಟ್‌ಬಾಲ್ ಲೀಗ್ 2ನಲ್ಲಿ ತವರಿನಾಚೆ ಆಡಬೇಕಾದ ಪಂದ್ಯದಿಂದ ಮೋಹನ್ ಬಾಗನ್ ಹಿಂದೆ ಸರಿದಿದೆ. ತಂಡದ ಆರು ಮಂದಿ ವಿದೇಶಿ ಆಟಗಾರರು ಆ ದೇಶಕ್ಕೆ ಪ್ರಯಾಣಿಸಲು ನಿರಾಕರಿಸಿದ ಕಾರಣ ಬಾಗನ್ಈ ನಿರ್ಧಾರಕ್ಕೆ ಬಂದಿದೆ.
ಟೆಹರಾನ್‌ನಲ್ಲಿ ಮಂಗಳವಾರ ಈ ಪಂದ್ಯ ನಡೆಯಬೇಕಿದ್ದು, ಆಟಗಾರರು ಭಾನುವಾರ ನಿರ್ಗಮಿಸಬೇಕಿತ್ತು.
ಈ ವಿದೇಶಿ ಆಟಗಾರರಿಗೆ ಆಯಾ ದೇಶಗಳು ಇರಾನ್ ಪ್ರಯಾಣ ಮಾಡದಿರುವಂತೆ ಸಲಹ ನೀಡಿದ್ದವು ಎಂದು ಕ್ಲಬ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.