ಮುಂಬೈ: ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ್ತಿ ಮತ್ತು ಎರಡು ಬಾರಿಯ ವಿಶ್ವಕಪ್ ವಿಜೇತೆ ಲಿಸಾ ಕೈಟ್ಲಿ ಅವರನ್ನು ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ಗುರುವಾರ ನೇಮಕ ಮಾಡಲಾಗಿದೆ.
1997 ಮತ್ತು 2005ರಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡದ ಭಾಗವಾಗಿದ್ದಾರೆ.
54 ವರ್ಷ ವಯಸ್ಸಿನ ಕೈಟ್ಲಿ 9 ಟೆಸ್ಟ್, 82 ಏಕದಿನ ಮತ್ತು ಒಂದು ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ್ದಾರೆ.
'ಲಿಸಾ ಅವರ ಆಗಮನ ಮುಂಬೈ ಇಂಡಿಯನ್ಸ್ಗೆ ಒಂದು ರೋಮಾಂಚಕಾರಿ ಅಧ್ಯಾಯ. ನಾವು ಇನ್ನೂ ಎತ್ತರಕ್ಕೆ ಏರಲು ಎದುರು ನೋಡುತ್ತಿದ್ದೇವೆ' ಎಂದು ನೀತಾ ಎಂ. ಅಂಬಾನಿ ಸಂತಸ ವ್ಯಕ್ತಪಡಿಸಿದರು. ಮುಂಬೈ ಇಂಡಿಯನ್ಸ್ 2023 ಮತ್ತು 2025ರಲ್ಲಿ ಡಬ್ಲ್ಯುಪಿಎಲ್ ಚಾಂಪಿಯನ್ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.