ಗುವಾಹಟಿ ಕ್ರಿಕೆಟ್ ಸ್ಟೇಡಿಯಂ
– ರಾಜಸ್ಥಾನ್ ರಾಯಲ್ಸ್ ವೆಬ್‌ಸೈಟ್
ಮುಂಬೈ (ಪಿಟಿಐ): ಭಾರತೀಯ ಕ್ರಿಕೆಟ್‌ನ ಯುವ ತಾರೆಗಳಾದ ಮುಶೀರ್ ಖಾನ್, ಆಯುಷ್ ಮ್ಹಾತ್ರೆ, ಸೂರ್ಯಾಂಶ್ ಶೆಡ್ಗೆ ಅವರು ಮೂರನೇ ವರ್ಷದ ಟಿ20 ಮುಂಬೈ ಲೀಗ್‌ನ ಆರಂಭಿಕ ಸುತ್ತಿನ ಹರಾಜಿನಲ್ಲಿ ಹೆಚ್ಚು ಮೌಲ್ಯ ಪಡೆದ ಕ್ರಿಕೆಟಿಗರಾಗಿದ್ದಾರೆ. ಈ ಬಾರಿಯ ಲೀಗ್ ಮೇ 26 ರಿಂದ ಜೂನ್ 8ರವರೆಗೆ ನಡೆಯಲಿದೆ.
ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದಲ್ಲಿರುವ 20 ವರ್ಷ ವಯಸ್ಸಿನ ಮುಶೀರ್ ಮತ್ತು 22 ವರ್ಷದ ಶೆಡ್ಗೆ ಅವರು ತಲಾ ₹15 ಲಕ್ಷಕ್ಕೆ ಆರ್ಕ್ ಅಂಧೇರಿ ತಂಡದ ಪಾಲಾಗಿದ್ದಾರೆ.
ಈ ವರ್ಷದ ಆರಂಭದಲ್ಲಿ ಮುಂಬೈ ಪರ ರಣಜಿಗೆ ಪದಾರ್ಪಣೆ ಮಾಡಿದ ಆಯುಷ್ ಮ್ಹಾತ್ರೆ ಬುಧವಾರ 14.75 ಲಕ್ಷಕ್ಕೆ ಟ್ರಂಫ್ ನೈಟ್ಸ್ ಮುಂಬೈ ನಾರ್ತ್‌ಈಸ್ಟ್ ಪಾಲಾಗಿದ್ದಾರೆ. 17 ವರ್ಷ ವಯಸ್ಸಿನ ಮ್ಹಾತ್ರೆ ಇತ್ತೀಚೆಗೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಪದಾರ್ಪಣೆ ಮಾಡಿದ್ದರು. ಈ ತಂಡವು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಐಕಾನ್ ಆಟಗಾರನಾಗಿ ಹೆಸರಿಸಿದೆ.
ಕೋಲ್ಕತ್ತ ನೈಟ್ ರೈಡರ್ಸ್ ತಂಡಕ್ಕೆ ಆಡುವ ಮುಂಬೈನ ಇನ್ನೊಬ್ಬ ಆಟಗಾರ, 20 ವರ್ಷ ವಯಸ್ಸಿನ ಅಂಗ್‌ಕ್ರಿಶ್ ರಘುವಂಶಿ ಅವರನ್ನು ಸೊಬೊ ಮುಂಬೈ ಫಾಲ್ಕನ್ಸ್ ₹14 ಲಕ್ಷಕ್ಕೆ ತನ್ನ ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಆಲ್‌ರೌಂಡರ್ ತನುಷ್ ಕೋಟ್ಯಾನ್ ಅವರು ₹10 ಲಕ್ಷಕ್ಕೆ ಮುಂಬೈ ಪ್ಯಾಂಥರ್ಸ್ ಪಾಲಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.