ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್: ಫೈನಲ್‌ಗೆ ಭಾರತ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2022, 12:42 IST
Last Updated 3 ಫೆಬ್ರುವರಿ 2022, 12:42 IST
ಭಾರತ ಯುವ ಪಡೆ
ಭಾರತ ಯುವ ಪಡೆ   

ಕೂಲಿಡ್ಜ್,(ಪಿಟಿಐ): ಯಶ್ ಧುಳ್ ನಾಯಕತ್ವದ ಭಾರತ ಯುವಪಡೆಯು 19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಫೈನಲ್‌ಗೆ ಲಗ್ಗೆಯಿಟ್ಟಿದೆ.

ಬುಧವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತ ತಂಡ ಯಶ್‌ ಧುಳ್‌ ಅವರ 110 ರನ್‌ಗಳ ನೆರವಿನೊಂದಿಗೆ 50 ಓವರ್‌ಗಳಲ್ಲಿ 290ರನ್‌ ಗಳಿಸಿತು. ಇದನ್ನು ಬೆನ್ನು ಹತ್ತಿದ ಆಸ್ಟ್ರೇಲಿಯ 41.5 ಓವರ್‌ಗಳಲ್ಲಿ 194 ರನ್‌ ಗಳಿಸಿ ಸರ್ವ ಪತನಗೊಂಡಿತು. ಭಾರತ 96 ರನ್‌ಗಳ ಜಯ ಸಾಧಿಸಿತು. ಈ ಮೂಲಕ ಸತತ ನಾಲ್ಕನೇ ಬಾರಿಗೆ ಭಾರತ ಫೈನಲ್‌ಗೆ ಪ್ರವೇಶಿಸಿದೆ.

ಫೆಬ್ರುವರಿ 5ರಂದು ಭಾರತ ಮತ್ತು ಇಂಗ್ಲೆಂಡ್‌ ನಡುವೆ ಫೈನಲ್‌ ಹಣಾಹಣಿ ನಡೆಯಲಿದೆ.

ADVERTISEMENT

ಸಂಕ್ಷಿಪ್ತ ಸ್ಕೋರ್‌

ಭಾರತ: 290/5 (50 ಒವರ್‌)
ಆಸ್ಟ್ರೇಲಿಯಾ: 194 (41.5 ಒವರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.