ಕ್ರಿಕೆಟ್
(ಸಾಂಕೇತಿಕ ಚಿತ್ರ)
ಕಠ್ಮಂಡ : ನೇಪಾಳದ 19 ವರ್ಷದೊಳಗಿನವರ ಕ್ರಿಕೆಟ್ ಆಟಗಾರರಿಗೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ತರಬೇತಿ ನೀಡಲಾಗುವುದು.
ಅಂಬಾಸೆಡರ್ಸ್‘ ಕ್ರಿಕೆಟ್ ಫೆಲೋಷಿಪ್ ಯೋಜನೆಯಲ್ಲಿ ಒಂದು ತಿಂಗಳ ಅವಧಿಗೆ ಉನ್ನತ ದರ್ಜೆಯ, ವೃತ್ತಿಪರ ಕ್ರಿಕೆಟ್ ತರಬೇತಿಯನ್ನು ನೀಡಲಗುವುದು ಎಂದು ಭಾರತ ರಾಯಭಾರಿ ಕಚೇರಿ ತಿಳಿಸಿದೆ.
ನೇಪಾಳದ ಮೂವರು ಪ್ರತಿಭಾನ್ವಿತ ಕ್ರಿಕೆಟಿಗರಾದ ನರೇನ್ ಭಟ್ಟಾ, ಸಾಹಿಲ್ ಪಟೇಲ್ ಮತ್ತು ಪೂಜಾ ಮಹತೋ ಅವರಿಗೆ ಇದೇ 15ರಿಂದ ಆಗಸ್ಟ್ 14ರವರೆಗೆ ಭೋಪಾಲದ ಎಲ್.ಬಿ. ಶಾಸ್ತ್ರಿ ಕ್ರಿಕೆಟ್ ಶಾಲಾದಲ್ಲಿ ತರಬೇತಿ ನೀಡಲಾಗುವುದು ಎಂದು ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.