ಬೆಂಗಳೂರು: ಆರ್.ವಿ.ಪ್ರಧಾನಕುಮಾರ್ ಅರಸ್ ಮತ್ತು ಜೆ.ನಾಗರಾಜ ಅವರು ಕರ್ನಾಟಕ ಕ್ರಿಕೆಟ್ ಅಂಪೈರ್‌ಗಳ ಸಂಘದ (ಎಸಿಯುಕೆ) ಅಧ್ಯಕ್ಷ ಮತ್ತು ಗೌರವ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಸಂಘದ 50ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ನಡೆದು ಎರಡು ವರ್ಷಗಳ (2024–26) ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು ಎಂದು ಪ್ರಕಟಣೆ ತಿಳಿಸಿದೆ.
ಪದಾಧಿಕಾರಿಗಳು
ಆರ್.ವಿ. ಪ್ರಧಾನ್ ಕುಮಾರ್ ಅರಸ್ (ಅಧ್ಯಕ್ಷ), ಬಿ.ಎಸ್.ರಘೋತ್ತಮ್ (ಉಪಾಧ್ಯಕ್ಷ), ಜೆ.ನಾಗರಾಜ (ಗೌರವ ಕಾರ್ಯದರ್ಶಿ), ಎಂ.ಆರ್.ಯೋಗಾನರಸಿಂಹ (ಜಂಟಿ ಗೌರವ ಕಾರ್ಯದರ್ಶಿ), ಜೆ.ರಾಹುಲ್ ರಾಜ್ (ಖಜಾಂಚಿ).
ಕಾರ್ಯಕಾರಿ ಸಮಿತಿ ಸದಸ್ಯರು: ಎಂ.ಎಸ್.ಸುಹಾಸ್, ಮಿಥುನ್ ಎಸ್.ಪಾಟೀಲ್, ಎಂ.ಆರ್.ರವೀಂದ್ರನಾಥ್, ಎನ್.ಶಶಿಧರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.