ADVERTISEMENT

ಟಿ20: ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಜಿಲೆಂಡ್‌ಗೆ 7 ವಿಕೆಟ್‌ಗಳ ಸುಲಭ ಜಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 16:05 IST
Last Updated 22 ಜುಲೈ 2025, 16:05 IST
<div class="paragraphs"><p>ಮಿಚೆಲ್ ಸ್ಯಾಂಟನರ್</p></div>

ಮಿಚೆಲ್ ಸ್ಯಾಂಟನರ್

   

(ಪಿಟಿಐ ಚಿತ್ರ)

ಹರಾರೆ: ಬೌಲರ್‌ಗಳ ಬಿಗು ದಾಳಿಯ ನೆರವಿನಿಂದ ನ್ಯೂಜಿಲೆಂಡ್ ತಂಡ ಟಿ20 ತ್ರಿಕೋನ ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿತು.

ADVERTISEMENT

ಹರಾರೆ ಸ್ಪೋರ್ಟ್ಸ್‌ ಕ್ಲಬ್ ಮೈದಾನದಲ್ಲಿ ಮೊದಲು ಆಡಿದ ಹರಿಣಗಳ ಪಡೆಯನ್ನು ಕಿವೀಸ್ ಬೌಲರ್‌ಗಳು 20 ಓವರುಗಳಲ್ಲಿ 8 ವಿಕೆಟ್‌ಗೆ 134 ರನ್‌ಗಳಿಗೆ ನಿಯಂತ್ರಿಸಿದರು. ಆರಂಭ ಆಟಗಾರ ಟಿಮ್‌ ಸೀಫರ್ಟ್‌ ಅವರ ಅಜೇಯ 66 ರನ್‌ಗಳ (48ಎ) ನೆರವಿನಿಂದ ನ್ಯೂಜಿಲೆಂಡ್ ತಂಡ 15.5 ಓವರುಗಳಲ್ಲಿ 3 ವಿಕೆಟ್‌ಗೆ 135 ರನ್ ಬಾರಿಸಿತು. ಸೀಫರ್ಟ್‌ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರರಾದರು.

ನ್ಯೂಜಿಲೆಂಡ್‌ ಅಜೇಯ ದಾಖಲೆಯೊಡನೆ ಫೈನಲ್ ತಲುಪಿದ್ದು, ಶನಿವಾರ ಇದೇ ಎದುರಾಳಿಯ ವಿರುದ್ಧ ಪಂದ್ಯ ಗೆಲ್ಲುವ ನೆಚ್ಚಿನ ತಂಡವೆನಿಸಿದೆ. ಆತಿಥೇಯ ಜಿಂಬಾಬ್ವೆ ಈ ಮೊದಲೇ ಹೊರಬಿದ್ದಿತ್ತು.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕಾ: 20 ಓವರುಗಳಲ್ಲಿ 8ಕ್ಕೆ 134 (ರೀಝಾ ಹೆಂಡ್ರಿಕ್ಸ್ 41, ಜಾರ್ಜ್ ಲೆಂಡೆ ಔಟಾಗದೇ 23; ಜೇಕಬ್ ಡಫಿ 33ಕ್ಕೆ2, ಆ್ಯಡಂ ಮಿಲ್ನೆ 21ಕ್ಕೆ2, ಮಿಚೆಲ್ ಸ್ಯಾಂಟನರ್ 26ಕ್ಕೆ2); ನ್ಯೂಜಿಲೆಂಡ್‌: 15.5 ಓವರುಗಳಲ್ಲಿ 3ಕ್ಕೆ 135 (ಸೀಫರ್ಟ್‌ಔಟಾಗದೇ  66, ಡೇರಿಲ್ ಮಿಚೆಲ್ ಔಟಾಗದೇ 20; ಸೆನುರಾನ್ ಮುತ್ತುಸಾಮಿ 24ಕ್ಕೆ2)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.