ADVERTISEMENT

ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್: ಮಿಥಾಲಿ ರಾಜ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2022, 13:04 IST
Last Updated 24 ಫೆಬ್ರುವರಿ 2022, 13:04 IST
ಹರ್ಮನ್‌ಪ್ರೀತ್ ಕೌರ್
ಹರ್ಮನ್‌ಪ್ರೀತ್ ಕೌರ್   

ಕ್ವಿನ್ಸ್‌ಟೌನ್ (ಎಪಿ/ಪಿಟಿಐ): ಲಯಕ್ಕೆ ಮರಳಿದ ತಾರಾ ಆಟಗಾರ್ತಿಯರಾದ ಸ್ಮೃತಿ ಮಂದಾನ ಮತ್ತು ಹರ್ಮನ್‌ಪ್ರೀತ್ ಕೌರ್ ಅವರ ಆಟದಿಂದ ಭಾರತ ತಂಡವು ನ್ಯೂಜಿಲೆಂಡ್ ಎದುರಿನ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯ ಗಳಿಸಿತು.

ಜಾನ್ ಡೇವಿಸ್ ಓವಲ್‌ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಭಾರತ ತಂಡವು 6 ವಿಕೆಟ್‌ಗಳಿಂದ ನ್ಯೂಜಿಲೆಂಡ್ ಎದುರು ಜಯಿಸಿತು.

ಟಾಸ್ ಗೆದ್ದ ಆತಿಥೇಯ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಅಮೆಲಿಯಾ ಕೆರ್ (66; 75ಎ, 4X6) ಅವರ ಅರ್ಧಶತಕದ ಬಲದಿಂದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 251 ರನ್ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 46 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 255 ರನ್ ಗಳಿಸಿ ಗೆದ್ದಿತು.

ADVERTISEMENT

ಕಳೆದ ಕೆಲವು ಪಂದ್ಯಗಳಲ್ಲಿ ಲಯದ ಕೊರತೆ ಅನುಭವಿಸಿದ್ದ ಹರ್ಮನ್‌ಪ್ರೀತ್ ಕೌರ್ (63; 66ಎ, 4X6, 6X1) ಇಲ್ಲಿ ಅಮೋಘ ಬ್ಯಾಟಿಂಗ್ ಮಾಡಿದರು. ನಾಯಕಿ ಮಿಥಾಲಿ ರಾಜ್ (ಔಟಾಗದೆ 57, 66ಎ, 4X6) ಅವರೊಂದಿಗೆ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 71 ರನ್ ಗಳಿಸಿದರು.

ಆರಂಭಿಕ ಬ್ಯಾಟರ್ ಸ್ಮೃತಿ ಮಂದಾನ (71; 84ಎ, 4X9)ಕೂಡ ಅಮೋಘ ಬ್ಯಾಟಿಂಗ್ ಮಾಡಿದರು. ಅವರ ತಾಳ್ಮೆಯ ಅರ್ಧಶತಕದ ಬಲದಿಂದ ಭಾರತ ತಂಡವು ಆರಂಭದಲ್ಲಿ ಕುಸಿಯುವುದು ತಪ್ಪಿತು. ಈ ಅಡಿಪಾಯದ ಮೇಲೆ ಸಮಾಧಾನಕರ ಜಯ ಅರಳಿತು.

ಐದು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 4–1ರಿಂದ ಜಯಿಸಿತು. ಆದರೆ, ಕ್ಲೀನ್‌ಸ್ವೀಪ್ ಕನಸು ಕೈಗೂಡಲಿಲ್ಲ.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 50 ಓವರ್‌ಗಳಲ್ಲಿ 9ಕ್ಕೆ251 (ಸೋಫಿ ಡಿವೈನ್ 34, ಅಮೆಲಿಯಾ ಕೆರ್ 66, ಲಾರೆನ್ ಡೌನ್ 30, ಜೆನ್ಸನ್ 30, ರಾಜೇಶ್ವರಿ ಗಾಯಕವಾಡ 61ಕ್ಕೆ2, ದೀಪ್ತಿ ಶರ್ಮಾ 42ಕ್ಕೆ 2, ಸ್ನೇಹಾ ರಾಣಾ 40ಕ್ಕೆ2) ಭಾರತ: 46 ಓವರ್‌ಗಳಲ್ಲಿ 4ಕ್ಕೆ 255(ಸ್ಮೃತಿ ಮಂದಾನ 71, ದೀಪ್ತಿ ಶರ್ಮಾ 21, ಹರ್ಮನ್‌ಪ್ರೀತ್ ಕೆರ್ 63, ಮಿಥಾಲಿ ರಾಜ್ ಔಟಾಗದೆ 57, ಹೈಲಿ ಜೆನ್ಸೆನ್ 29ಕ್ಕೆ1, ಹೆನಾ ರೊವ್ 41ಕ್ಕೆ1, ಫ್ರಾನ್‌ ಜೋನ್ಸ್ 40ಕ್ಕೆ1, ಅಮೆಲಿಯಾ ಕೆರ್ 55ಕ್ಕೆ1) ಫಲಿತಾಂಶ: ಭಾರತ ತಂಡಕ್ಕೆ 6 ವಿಕೆಟ್‌ಗಳಿಂದ ಜಯ. ಆಸ್ಟ್ರೇಲಿಯಾಕ್ಕೆ 4–1ರಿಂದ ಸರಣಿ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.