ADVERTISEMENT

ಮಹಿಳಾ ಕ್ರಿಕೆಟ್ : ರಿಚಾ ಅರ್ಧಶತಕ ವ್ಯರ್ಥ- ನ್ಯೂಜಿಲೆಂಡ್ ಜಯಭೇರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2022, 11:38 IST
Last Updated 22 ಫೆಬ್ರುವರಿ 2022, 11:38 IST
ರಿಚಾ ಘೋಷ್
ರಿಚಾ ಘೋಷ್   

ಕ್ವಿನ್ಸ್‌ಟನ್: ಅಮೆಲಿಯಾ ಕೆರ್ ಆಲ್‌ರೌಂಡ್ ಆಟದ ಬಲದಿಂದ ನ್ಯೂಜಿಲೆಂಡ್ ತಂಡವು ಭಾರತದ ಎದುರು ಸತತ ನಾಲ್ಕನೇ ಏಕದಿನ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ ಆತಿಥೇಯ ತಂಡವು 63 ರನ್‌ಗಳಿಂದ ಜಯಿಸಿತು. ಐದು ಪಂದ್ಯಗಳ ಸರಣಿಯಲ್ಲಿ 4–0 ಮುನ್ನಡೆ ಗಳಿಸಿತು. ಮಳೆಯಿಂದಾಗಿ ಪಂದ್ಯದಲ್ಲಿ 20 ಓವರ್‌ಗಳನ್ನು ಕಡಿತ ಮಾಡಲಾಗಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಅಮೆಲಿಯಾ (68; 33ಎ, 4X11, 6X1) ಬಲದಿಂದ 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 191 ರನ್‌ ಗಳಿಸಿತು. ಅದಕ್ಕುತ್ತರವಾಗಿ ಭಾರತ ತಂಡವು 17.5 ಓವರ್‌ಗಳಲ್ಲಿ 128 ರನ್ ಗಳಿಸಿ ಆಲೌಟ್ ಆಯಿತು. ರಿಚಾ ಘೋಷ್ (52; 29ಎ) ಮತ್ತು ನಾಯಕಿ ಮಿಥಾಲಿ ರಾಜ್ (30; 28ಎ) ಬಿಟ್ಟರೆ ಉಳಿದವರು ಬ್ಯಾಟಿಂಗ್‌ನಲ್ಲಿ ವಿಫಲರಾದರು.

ADVERTISEMENT

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 5ಕ್ಕೆ 191 (ಸೋಫಿ ಡಿವೈನ್ 32, ಸೂಜಿ ಬೇಟ್ಸ್ 41, ಅಮೆಲಿಯಾ ಕೆರ್ ಔಟಾಗದೆ 68, ಸೆಟರ್‌ವೆಟ್ 32, ರೇಣುಕಾ ಸಿಂಗ್ 33ಕ್ಕೆ2, ರಾಜೇಶ್ವರಿ ಗಾಯಕವಾಡ 26ಕ್ಕೆ1, ದೀಪ್ತಿ ಶರ್ಮಾ 49ಕ್ಕೆ1) ಭಾರತ: 17.5 ಓವರ್‌ಗಳಲ್ಲಿ 128 (ಮಿಥಾಲಿ ರಾಜ್ 30, ರಿಚಾ ಘೋಷ್ 52, ಸ್ಮೃತಿ ಮಂದಾನ 13, ಫ್ರಾನ್ಸಿಸ್ ಮೆಕೆ 22ಕ್ಕೆ2, ಜೆಸ್ ಕೆರ್ 11ಕ್ಕೆ2, ಹೈಲಿ ಜೆನ್ಸನ್ 32ಕ್ಕೆ3, ಅಮೆಲಿಯಾ ಕೆರ್ 30ಕ್ಕೆ3) ಫಲಿತಾಂಶ: ನ್ಯೂಜಿಲೆಂಡ್ ತಂಡಕ್ಕೆ 63 ರನ್‌ಗಳ ಜಯ (ಮಳೆಯಿಂದಾಗಿ ಅಡ್ಡಿ. 20 ಓವರ್‌ಗಳು ಕಡಿತ) ಮತ್ತು 4–0ಯಿಂದ ಸರಣಿ ಮುನ್ನಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.