ADVERTISEMENT

ನ್ಯೂಜಿಲೆಂಡ್‌ ಟೆಸ್ಟ್‌ ಸರಣಿಗೆ ಕೇನ್ ವಿಲಿಯಮ್ಸ್ ಅಲಭ್ಯ

ಏಜೆನ್ಸೀಸ್
Published 8 ಫೆಬ್ರುವರಿ 2022, 14:35 IST
Last Updated 8 ಫೆಬ್ರುವರಿ 2022, 14:35 IST
ಟಾಮ್ ಲಥಾಮ್ (ಎಡ) ಮತ್ತು ಕೇನ್ ವಿಲಿಯಮ್ಸನ್ –ರಾಯಿಟರ್ಸ್ ಚಿತ್ರ
ಟಾಮ್ ಲಥಾಮ್ (ಎಡ) ಮತ್ತು ಕೇನ್ ವಿಲಿಯಮ್ಸನ್ –ರಾಯಿಟರ್ಸ್ ಚಿತ್ರ   

ವೆಲಿಂಗ್ಟನ್: ದಕ್ಷಿಣ ಆಫ್ರಿಕಾ ಎದುರು ನಡೆಯಲಿರುವ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ ತಂಡಕ್ಕೆ ಕೇನ್ ವಿಲಿಯಮ್ಸನ್ ಅಲಭ್ಯರಾಗಲಿದ್ದಾರೆ. ಕೇನ್ ಮೊಣಕೈ ಗಾಯದಿಂದ ಬಳಲುತ್ತಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಕೋಚ್ ಗ್ಯಾರಿ ಸ್ಟಡ್ ತಿಳಿಸಿದ್ದಾರೆ.

15 ಮಂದಿಯ ತಂಡವನ್ನು ಮಂಗಳವಾರ ಪ್ರಕಟಿಸಲಾಗಿದ್ದು ಬ್ಯಾಟರ್ ಟಾಮ್ ಲಥಾಮ್‌ ಅವರು ಪ್ರಭಾರ ನಾಯಕರಾಗಿರುವರು. ವಿಕೆಟ್ ಕೀಪರ್ ಕ್ಯಾಮ್ ಫ್ಲೆಚರ್‌ ಮತ್ತು ವೇಗದ ಬೌಲರ್ ಬ್ಲಾರ್ ಟಕ್ನರ್ ಅವರನ್ನು ಹೊಸಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಬ್ಯಾಟರ್ ಹ್ಯಾಮಿಶ್ ರುಥರ್‌ಫರ್ಡ್‌ ಅವರನ್ನು ಏಳು ವರ್ಷಗಳ ನಂತರ ತಂಡಕ್ಕೆ ಕರೆಸಲಾಗಿದ್ದು ಫಾರ್ಮ್ ಕಳೆದುಕೊಂಡು ಕೆಲಕಾಲದಿಂದ ತಂಡದಿಂದ ಹೊರಗಿದ್ದ ಆಲ್‌ರೌಂಡರ್ ಕಾಲಿನ್ ಡಿ ಗ್ರಾಂಡ್‌ಹೋಮ್ ಅವರೂ ಮರಳಿ ಬಂದಿದ್ದಾರೆ.

ADVERTISEMENT

ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಮೊದಲ ಟೆಸ್ಟ್‌ಗೆ ಅಲಭ್ಯರಿರುತ್ತಾರೆ ಎಂದು ಕೂಡ ಕೋಚ್ ತಿಳಿಸಿದ್ದಾರೆ. ಸರನಿ ಇದೇ 17ರಂದು ಆರಂಭವಾಗಲಿದೆ. ಮೊದಲ ಪಂದ್ಯ ಕ್ರೈಸ್ಟ್ ಚರ್ಚ್‌ನಲ್ಲಿ ನಡೆಯಲಿದೆ.

ತಂಡ: ಟಾಮ್ ಲಥಾಮ್ (ನಾಯಕ), ಟಾಮ್‌ ಬ್ಲಂಡೆಲ್, ಡೇವಾನ್ ಕಾನ್ವೆ, ಕಾಲಿನ್ ಡಿ ಗ್ರ್ಯಾಂಡ್ ಹೋಮ್‌, ಕ್ಯಾಮ್‌ ಫ್ಲೆಚರ್, ಮ್ಯಾಟ್ ಹೆನ್ರಿ, ಕೈಲ್ ಜೆಮೀಸನ್‌, ಡ್ಯಾರಿಲ್ ಮಿಚೆಲ್‌, ಹೆನ್ರಿ ನಿಕೋಲ್ಸ್‌, ರಚಿನ್ ರವೀಂದ್ರ, ಹ್ಯಾಮಿಷ್ ರುಥರ್‌ಫಾರ್ಡ್‌, ಟಿಮ್ ಸೌಥಿ, ಬ್ಲೇರ್‌ ಟಿಕ್ನರ್‌, ನೀಲ್ ವ್ಯಾಗ್ನರ್‌, ವಿಲ್ ಯಂಗ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.