ADVERTISEMENT

ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ: ರೈಸಿಂಗ್‌ ಸ್ಟಾರ್‌ಗೆ ಚಾಂಪಿಯನ್ ಪಟ್ಟ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2019, 13:59 IST
Last Updated 26 ಮಾರ್ಚ್ 2019, 13:59 IST
ಪ್ರಥಮ‌ ಸ್ಥಾನ ಪಡೆದ ರೈಸಿಂಗ್ ಸ್ಟಾರ್ ತಂಡ
ಪ್ರಥಮ‌ ಸ್ಥಾನ ಪಡೆದ ರೈಸಿಂಗ್ ಸ್ಟಾರ್ ತಂಡ   

ಮಡಿಕೇರಿ: ವಿರಾಜಪೇಟೆ ಸಮೀಪದ ಕಡಂಗದಲ್ಲಿ ನಡೆದ ನಾಲ್ಕನೇ ವರ್ಷದ ಕಡಂಗ ಪ್ರೀಮಿಯರ್ ಲೀಗ್ (ಕೆಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ರೈಸಿಂಗ್‌ ಸ್ಟಾರ್ ತಂಡವು ಚಾಂಪಿಯನ್‌ ಆಗಿ ಹೊರಹೊಮ್ಮಿತು. ರೈಸಿಂಗ್‌ ಸ್ಟಾರ್‌ ತಂಡವು ರೆಡ್‌ಬ್ಯಾಕ್ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರೈಸಿಂಗ್ ಸ್ಟಾರ್ ತಂಡವು, 5 ಓವರ್‌ಗಳಲ್ಲಿ 52 ರನ್ ಕಲೆ ಹಾಕಿತು. ಈ ಮೊತ್ತ ಬೆನ್ನತ್ತಿದ ರೆಡ್‌ಬ್ಯಾಕ್‌ ತಂಡವು, 41 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಇದಕ್ಕೂ ಮೊದಲು ಟೈಟಾನ್ಸ್ ಹಾಗೂ ರೆಡ್‌ಬ್ಯಾಕ್ ನಡುವೆ ನಡೆದಮೊದಲನೇ ಸೆಮಿಫೈನಲ್ ಪಂದ್ಯವು ಡ್ರಾ ಆಯಿತು. ಸೂಪರ್ ಓವರ್‌ನಲ್ಲಿ ರೆಡ್‌ ಬ್ಯಾಕ್ ಗೆದ್ದಿತ್ತು.

ADVERTISEMENT

ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವೆಸ್ಟರ್ನ್ ವಾರಿಯರ್ಸ್ ವಿರುದ್ಧ ರೈಸಿಂಗ್ ಸ್ಟಾರ್ ಜಯಿಸಿತ್ತು. ಉತ್ತಮ ಆಟಗಾರ ಪ್ರಶಸ್ತಿಯನ್ನು ರೆಡ್‌ಬ್ಯಾಕ್‌ನ ಯೂನುಸ್ ಪಡೆದರು.

ಪದಾಧಿಕಾರಿಗಳ ಆಯ್ಕೆ: ಮುಂದಿನ ವರ್ಷ ನಡೆಯುವ 5ನೇ ವರ್ಷದ ಕೆಪಿಎಲ್ ಟೂರ್ನಿಯ ಆಡಳಿತ ಮಂಡಳಿ ಅಧ್ಯಕ್ಷರಾಗಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಆಯ್ಕೆಯಾದರು. ಸದಸ್ಯರಾಗಿ ಕರೀಂ, ಸುಬೀರ್, ಸಮದ್, ಇಕ್ಬಾಲ್, ನೌಶಾದ್, ಶಾನಿದ್ , ಶರೀಫ್ ಆಯ್ಕೆಯಾದರು.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಅಧ್ಯಕ್ಷ ಕಿರಣ್ ಕಾರ್ಯಪ್ಪ, ಗ್ರಾಮ ಪಂಚಾಯತಿ ಸದಸ್ಯರಾದ ಕೊಡೀರ ಪ್ರಸನ್ನ, ಕಣಿಯರ ಪ್ರಕಾಶ್, ಕರೀಂ, ಮೊಹಮ್ಮದ್, ಅಬೂಬಕರ್ , ಗಫೂರ್, ಸಮದ್, ಆಯೋಜಕರಾದ ಅಸ್ಕರ್, ನೌಷಾದ್, ಜುನೈದ್, ಅಜರ್, ಯೂನುಸ್, ಸಮೀರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.