ADVERTISEMENT

ಕ್ರಿಕೆಟ್‌: ಶ್ರೀಲಂಕಾ ಉತ್ತಮ ಮೊತ್ತ

ಏಜೆನ್ಸೀಸ್
Published 15 ಡಿಸೆಂಬರ್ 2018, 18:30 IST
Last Updated 15 ಡಿಸೆಂಬರ್ 2018, 18:30 IST
ನ್ಯೂಜಿಲೆಂಡ್‌ ತಂಡದ ಬೌಲರ್‌ ಟಿಮ್‌ ಸೌಥಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಕ್ಷಣ –ಎಎಫ್‌ಪಿ ಚಿತ್ರ
ನ್ಯೂಜಿಲೆಂಡ್‌ ತಂಡದ ಬೌಲರ್‌ ಟಿಮ್‌ ಸೌಥಿ ಕ್ಯಾಚ್ ಹಿಡಿಯಲು ಪ್ರಯತ್ನಿಸಿದ ಕ್ಷಣ –ಎಎಫ್‌ಪಿ ಚಿತ್ರ   

ವೆಲ್ಲಿಂಗ್ಟನ್‌: ಏಂಜೆಲೊ ಮ್ಯಾಥ್ಯೂಸ್‌ (83; 153ಎ, 9ಬೌಂ, 1ಸಿ) ಮತ್ತು ವಿಕೆಟ್‌ ಕೀಪರ್‌ ನಿರೋಷನ್‌ ಡಿಕ್ವೆಲ್ಲಾ (ಬ್ಯಾಟಿಂಗ್‌ 73; 91ಎ, 10ಬೌಂ) ಅವರ ಅರ್ಧಶತಕಗಳ ಬಲದಿಂದ ಶ್ರೀಲಂಕಾ ತಂಡ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಉತ್ತಮ ಮೊತ್ತ ಗಳಿಸಿದೆ.

ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ಶನಿವಾರ ಮೊದಲು ಬ್ಯಾಟ್‌ ಮಾಡಿದ ದಿನೇಶ್‌ ಚಾಂಡಿಮಲ್‌ ಬಳಗ ಮೊದಲ ಇನಿಂಗ್ಸ್‌ನಲ್ಲಿ 87 ಓವರ್‌ಗಳಲ್ಲಿ 9 ವಿಕೆಟ್‌ಗೆ 275ರನ್‌ ಗಳಿಸಿದೆ.

ಆರಂಭಿಕ ಸಂಕಷ್ಟ: ಬ್ಯಾಟಿಂಗ್‌ ಆರಂಭಿಸಿದ ಲಂಕಾ ತಂಡಕ್ಕೆ ಟಿಮ್‌ ಸೌಥಿ ಆರಂಭದಲ್ಲೇ ಪೆಟ್ಟು ನೀಡಿದರು. ಅವರು, ಧನುಷ್ಕಾ ಗುಣತಿಲಕ (1), ಧನಂಜಯ ಡಿಸಿಲ್ವ (1) ಮತ್ತು ಕುಶಾಲ್‌ ಮೆಂಡಿಸ್‌ (2) ಅವರ ವಿಕೆಟ್‌ ಉರುಳಿಸಿದರು. ಈ ಹಂತದಲ್ಲಿ ದಿಮುತ್‌ ಕರುಣಾರತ್ನೆ (79; 144ಎ, 11ಬೌಂ) ಮತ್ತು ಮ್ಯಾಥ್ಯೂಸ್‌ ಸುಂದರ ಇನಿಂಗ್ಸ್‌ ಕಟ್ಟಿದರು. ಇವರು ನಾಲ್ಕನೇ ವಿಕೆಟ್‌ ಪಾಲುದಾರಿಕೆಯಲ್ಲಿ 133ರನ್‌ ಗಳಿಸಿ ತಂಡವನ್ನು ಆರಂಭಿಕ ಸಂಕಷ್ಟದಿಂದ ಪಾರು ಮಾಡಿದರು.

ADVERTISEMENT

60ನೇ ಓವರ್‌ನಲ್ಲಿ ಮ್ಯಾಥ್ಯೂಸ್‌ ವಿಕೆಟ್‌ ಉರುಳಿಸಿದ ಸೌಥಿ ಆತಿಥೇಯರಿಗೆ ಮೇಲುಗೈ ತಂದುಕೊಟ್ಟರು. ಆದರೆ ಡಿಕ್ವೆಲ್ಲಾ ದಿಟ್ಟ ಆಟ ಆಡಿ ಸಿಂಹಳೀಯ ನಾಡಿನ ತಂಡದ ಮೊತ್ತ ಹೆಚ್ಚಿಸಿದರು.

ಸಂಕ್ಷಿಪ್ತ ಸ್ಕೋರ್‌: ಶ್ರೀಲಂಕಾ, ಮೊದಲ ಇನಿಂಗ್ಸ್‌: 87 ಓವರ್‌ಗಳಲ್ಲಿ 9 ವಿಕೆಟ್‌ಗೆ 275 (ದಿಮುತ್ ಕರುಣಾರತ್ನೆ 79, ಏಂಜೆಲೊ ಮ್ಯಾಥ್ಯೂಸ್‌ 83, ನಿರೋಷನ್‌ ಡಿಕ್ವೆಲ್ಲಾ ಬ್ಯಾಟಿಂಗ್‌ 73, ದಿಲ್ರುವಾನ ಪೆರೇರಾ 16; ಟ್ರೆಂಟ್‌ ಬೌಲ್ಟ್‌ 77ಕ್ಕೆ1, ಟಿಮ್‌ ಸೌಥಿ 67ಕ್ಕೆ5, ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌ 35ಕ್ಕೆ1, ನೀಲ್‌ ವಾಗ್ನರ್‌ 75ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.