
ಕ್ರಿಕೆಟ್ (ಪ್ರಾತಿನಿಧಿಕ ಚಿತ್ರ)
ದಿಮಾಪುರ : ಕನ್ನಡಿಗ ಡೇಗಾ ನಿಶ್ಚಲ್ ಮತ್ತು ಇಮ್ಲಿವಾತಿ ಲೆಮ್ತುರ್ ಅವರ ಅಜೇಯ ಶತಕಗಳ ನೆರವಿನಿಂದ ಅನನುಭವಿ ನಾಗಾಲ್ಯಾಂಡ್ ತಂಡ, ತಮಿಳುನಾಡು ತಂಡಕ್ಕೆ ದಿಟ್ಟ ಉತ್ತರ ನೀಡಿದೆ. ತಮಿಳುನಾಡು ತಂಡದ 512 ರನ್‌ಗಳಿಗೆ ಉತ್ತರವಾಗಿ ನಾಗಾಲ್ಯಾಂಡ್ ಮೂರನೇ ದಿನದಾಟದ ಕೊನೆಗೆ 5 ವಿಕೆಟ್‌ಗೆ 365 ರನ್ ಗಳಿಸಿದೆ.
ಒಂದು ಹಂತದಲ್ಲಿ 31 ರನ್‌ಗಳಿಗೆ ವಿಕೆಟ್ ಕಳೆದುಕೊಂಡು ಆರಂಭಿಕ ಕುಸಿತ ಕಂಡಿದ್ದ ನಾಗಾಲ್ಯಾಂಡ್‌ಗೆ ಕರ್ನಾಟಕದ ಮಾಜಿ ಆಟಗಾರ ನಿಶ್ಚಲ್ (161, 350ಎ, 4x24) ಎರಡು ಉಪಯುಕ್ತ ಜೊತೆಯಾಟಗಳ ಮೂಲಕ ಆಸರೆಯಾದರು. ನಾಲ್ಕೂ ವಿಕೆಟ್‌ಗಳು ಎಡಗೈ ವೇಗಿ ಗುರಜಪನೀತ್ ಸಿಂಗ್ (57ಕ್ಕೆ4) ಪಾಲಾಗಿದ್ದವು.
ಆದರೆ ನಿಶ್ಚಲ್ ಮತ್ತು ಯುಗಂಧರ್ (67, 180ಎ) ಐದನೇ ವಿಕೆಟ್‌ಗೆ 129 ರನ್ ಸೇರಿಸಿದರು. ನಂತರ ಲೆಮ್ತುರ್ (ಅಜೇಯ 115, 203ಎ, 4X17, 6X3) ಮುರಿಯದ ಆರನೇ ವಿಕೆಟ್‌ಗೆ 205 ರನ್ ಸೇರಿಸಿದ್ದರಿಂದ ಈಶಾನ್ಯದ ತಂಡ ಮೊದಲ ಇನಿಂಗ್ಸ್ ಮುನ್ನಡೆಯ ಕನಸಿನಲ್ಲಿದೆ. ತಂಡ 147 ರನ್ ಹಿನ್ನಡೆಯಲ್ಲಿದ್ದು, ಮಂಗಳವಾರ ಪಂದ್ಯದ ಅಂತಿಮ ದಿನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.