ADVERTISEMENT

ಟೆಸ್ಟ್‌: ಮೂರನೇ ದಿನದಾಟಕ್ಕೆ ಮಳೆ ಅಡ್ಡಿ

ಏಜೆನ್ಸೀಸ್
Published 16 ಆಗಸ್ಟ್ 2020, 7:17 IST
Last Updated 16 ಆಗಸ್ಟ್ 2020, 7:17 IST
ಮೂರನೇ ದಿನವಾದ ಶನಿವಾರ ಅಂಪೈರ್‌ಗಳೊಂದಿಗೆ ಅಂಗಣದಲ್ಲಿ ಹೆಜ್ಜೆ ಹಾಕಿದ ಪಾಕಿಸ್ತಾನದ ನಾಯಕ ಅಜರ್ ಅಲಿ –ಪಿಟಿಐ ಚಿತ್ರ
ಮೂರನೇ ದಿನವಾದ ಶನಿವಾರ ಅಂಪೈರ್‌ಗಳೊಂದಿಗೆ ಅಂಗಣದಲ್ಲಿ ಹೆಜ್ಜೆ ಹಾಕಿದ ಪಾಕಿಸ್ತಾನದ ನಾಯಕ ಅಜರ್ ಅಲಿ –ಪಿಟಿಐ ಚಿತ್ರ   

ಸೌತಾಂಪ್ಟನ್: ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನವಾದ ಶನಿವಾರವೂ ಮಳೆ ಕಾಡಿತು. ಹೀಗಾಗಿ ಒಂದು ಎಸೆತವನ್ನು ಕೂಡ ಹಾಕಲಾಗಲಿಲ್ಲ. ಮೊದಲ ದಿನವಾದಗುರುವಾರ 45.4 ಓವರ್‌ಗಳ ಆಟ ಮಾತ್ರ ನಡೆದಿತ್ತು. ಪಾಕಿಸ್ತಾನ ಐದು ವಿಕೆಟ್‌ಗಳಿಗೆ 126 ರನ್ ಗಳಿಸಿತ್ತು. ಶುಕ್ರವಾರವೂ ಮಳೆ ಮತ್ತು ಮಂದಬೆಳಕು ಕಾಡಿತ್ತು. ಕುಸಿತದಿಂದ ತಂಡವನ್ನು ರಕ್ಷಿಸಿದ್ದ ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ ಅವರ ಅರ್ಧಶತಕದಿಂದಾಗಿ ಪಾಕಿಸ್ತಾನ ಒಂಬತ್ತು ವಿಕೆಟ್‌ ಕಳೆದುಕೊಂಡು 223 ರನ್ ಕಲೆ ಹಾಕಿತ್ತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ, ಮೊದಲ ಇನಿಂಗ್ಸ್‌: 86 ಓವರ್‌ಗಳಲ್ಲಿ 9ಕ್ಕೆ 223 (ಬಾಬರ್ ಆಜಂ 47, ಮೊಹಮ್ಮದ್ ರಿಜ್ವಾನ್ ಬ್ಯಾಟಿಂಗ್ 60; ಜೇಮ್ಸ್ ಆ್ಯಂಡರ್ಸನ್ 48ಕ್ಕೆ3, ಸ್ಟುವರ್ಟ್ ಬ್ರಾಡ್ 56ಕ್ಕೆ3, ಸ್ಯಾಮ್ ಕರನ್ 44ಕ್ಕೆ1, ಕ್ರಿಸ್ ವೋಕ್ಸ್ 55ಕ್ಕೆ1). ಎರಡನೇ ದಿನವಾದ ಶುಕ್ರವಾರದ ಮುಕ್ತಾಯಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT