ADVERTISEMENT

ಆಯ್ಕೆ ಸಮಿತಿಗೆ ಫಿಟ್ನೆಸ್‌ ಅಪ್ಡೇಟ್‌ ಮಾಡುವುದು ನನ್ನ ಕೆಲಸವಲ್ಲ: ಮೊಹಮ್ಮದ್ ಶಮಿ

ಪಿಟಿಐ
Published 14 ಅಕ್ಟೋಬರ್ 2025, 14:44 IST
Last Updated 14 ಅಕ್ಟೋಬರ್ 2025, 14:44 IST
ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ   

ಕೋಲ್ಕತ್ತ: ತಮ್ಮನ್ನು ಆಸ್ಟ್ರೇಲಿಯಾ ಪ್ರವಾಸಕ್ಕೆ ಕಡೆಗಣಿಸಿದ ಆಯ್ಕೆಗಾರರ ವಿರುದ್ಧ ಭಾರತ ತಂಡದ ವೇಗಿ ಮೊಹಮ್ಮದ್ ಶಮಿ ಅಸಮಾಧಾನ ಹೊರಹಾಕಿದ್ದಾರೆ. ರಣಜಿ ಟ್ರೋಫಿಯಲ್ಲಿ ಬಂಗಾಲ ತಂಡಕ್ಕೆ ಆಡಲು ಲಭ್ಯರಾಗಿರುವುದು ತಾವು ಆಡಲು ಸಮರ್ಥ ಎಂಬುದನ್ನು ಸೂಚಿಸಿದೆ. ಆಯ್ಕೆ ಸಮಿತಿಗೆ ಫಿಟ್ನೆಸ್‌ ಬಗ್ಗೆ ಅಪ್ಡೇಟ್‌ ಮಾಡುವುದು ತಮ್ಮ ಕೆಲಸವಲ್ಲ ಎಂದಿದ್ದಾರೆ.

35 ವರ್ಷ ವಯಸ್ಸಿನ ಶಮಿ ಅವರು ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೊನೆಯ ಬಾರಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ವರುಣ್ ಚಕ್ರವರ್ತಿ ಜೊತೆ ಅವರು ತಂಡದ ಪರ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದರು. 2023ರ ಏಕದಿನ ವಿಶ್ವಕಪ್ ಬಳಿಕ ಅವರು ಪಾದದ ಮತ್ತು ಮೊಣಗಂಟು ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ.

2023ರ ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ನಲ್ಲಿ  ಅವರು ಕೊನೆಯ ಬಾರಿ ಟೆಸ್ಟ್‌ ಪಂದ್ಯ ಆಡಿದ್ದರು. 

ADVERTISEMENT

‘ಈ ಹಿಂದೆಯೂ ಇದನ್ನು ಹೇಳಿದ್ದೇನೆ. ಆಯ್ಕೆ ನನ್ನ ಕೈಲಿ ಇಲ್ಲ. ಫಿಟ್ನೆಸ್‌ ಸಮಸ್ಯೆ ಇದ್ದಿದ್ದರೆ ನಾನು ಬಂಗಾಳ ತಂಡಕ್ಕೆ ಆಯ್ಕೆಯಾಗುತ್ತಿರಲಿಲ್ಲ’ ಎಂದು ಶಮಿ ಈಡನ್‌ ಗಾರ್ಡನ್ಸ್‌ನಲ್ಲಿ ಉತ್ತರಾಖಂಡ ತಂಡದ ಎದುರಿನ ಪಂದ್ಯದ ಮುನ್ನಾದಿನವಾದ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.