ADVERTISEMENT

ಯುವರಾಜ್‌ ಸಿಂಗ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2022, 21:18 IST
Last Updated 22 ನವೆಂಬರ್ 2022, 21:18 IST

ಪಣಜಿ (ಪಿಟಿಐ): ಇಲ್ಲಿಯ ಮೋರ್ಜಿಮ್‌ನಲ್ಲಿ ಅಕ್ರಮವಾಗಿ ವಿಲ್ಲಾ ನಿರ್ಮಿಸಿದ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರಿಗೆ ರಾಜ್ಯ ಪ್ರವಾಸೋದ್ಯಮ ಇಲಾಖೆ ನೋಟಿಸ್‌ ನೀಡಿದೆ.

ಆನ್‌ಲೈನ್ ಹೋಮ್‌ಸ್ಟೇ ನಡೆಸುವುದಕ್ಕಾಗಿ ಯುವರಾಜ್ ಅವರು ವಿಲ್ಲಾ ನಿರ್ಮಿಸಿದ್ದು, ಸಂಬಂಧಿಸಿದ ರಾಜ್ಯದ ಅಧಿಕಾರಿಗಳ ಬಳಿ ಇದನ್ನು ನೋಂದಾಯಿಸಿಲ್ಲ ಎನ್ನಲಾಗಿದೆ. ಈ ಕುರಿತು ಡಿಸೆಂಬರ್ 8ರಂದು ವಿಚಾರಣೆಗೆ ಹಾಜರಾಗುವಂತೆ ಪ್ರವಾಸೋದ್ಯಮ ಇಲಾಖೆ ಯುವರಾಜ್‌ ಅವರಿಗೆ ಸೂಚಿಸಿದೆ.

ಹೋಮ್‌ಸ್ಟೇ ನಡೆಸಲು ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡುವುದನ್ನು ಗೋವಾ ರಾಜ್ಯದಲ್ಲಿ ಕಡ್ಡಾಯಗೊಳಿಸ
ಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.