ADVERTISEMENT

ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿ; ಬಾಂಗ್ಲಾದೇಶ ಜಯಭೇರಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2021, 19:33 IST
Last Updated 19 ಅಕ್ಟೋಬರ್ 2021, 19:33 IST
ಶಕೀಬ್‌ ಅಲ್ ಹಸನ್ ಮತ್ತು ಮೊಹಮ್ಮದ್ ನೈಮ್   – ಎಎಫ್‌ಪಿ ಚಿತ್ರ
ಶಕೀಬ್‌ ಅಲ್ ಹಸನ್ ಮತ್ತು ಮೊಹಮ್ಮದ್ ನೈಮ್   – ಎಎಫ್‌ಪಿ ಚಿತ್ರ   

ಅಲ್ ಅಮೆರತ್: ಶಕೀಬ್ ಅಲ್ ಹಸನ್‌ (42 ರನ್‌, 3 ವಿಕೆಟ್‌) ಅವರ ಆಲ್‌ರೌಂಡ್‌ ಆಟದ ಬಲದಿಂದ ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನ ಪ್ರಾಥಮಿಕ ಸುತ್ತಿನ ಪಂದ್ಯದಲ್ಲಿ ಜಯಿಸಿತು.

ಮಂಗಳವಾರ ನಡೆದ ಪಂದ್ಯದಲ್ಲಿ 26 ರನ್‌ಗಳಿಂದ ಒಮನ್ ತಂಡವನ್ನು ಸೋಲಿಸಿತು.

ಬಾಂಗ್ಲಾ ತಂಡವು ಸೂಪರ್ 12ರ ಹಂತಕ್ಕೆ ತಲುಪುವ ಅವಕಾಶ ಜೀವಂತವಾಗುಳಿಯಬೇಕಾದರೆ ಈ ಪಂದ್ಯದಲ್ಲಿ ಜಯಿಸುವುದು ಅನಿವಾರ್ಯವಾಗಿತ್ತು.

ADVERTISEMENT

ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಬಾಗ್ಲಾ , ಮೊಹಮ್ಮದ್ ನೈಮ್‌ ಅರ್ಧಶತಕ (64;50ಎ, 3ಬೌಂಡರಿ, 4ಸಿಕ್ಸರ್) ಮತ್ತು ಶಕೀಬ್ ಅಲ್ ಹಸನ್ ಅವರ ಅಬ್ಬರದ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಲ್ಲಿ 153 ರನ್‌ ಗಳಿಸಿತು.

ಒಮನ್ ತಂಡದ ಬಿಲಾಲ್ ಖಾನ್ ಮತ್ತು ಫಯಾಜ್ ಭಟ್ ತಲಾ ಮೂರು ವಿಕೆಟ್ ಗಳಿಸಿದರು.

ಗುರಿ ಬೆನ್ನತ್ತಿದ ಒಮನ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 127 ರನ್‌ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಜೀತೇಂದರ್ ಸಿಂಗ್ (40) ಹೋರಾಟ ವ್ಯರ್ಥವಾಯಿತು. ಮುಸ್ತಫಿಜುರ್ ರೆಹಮಾನ್ (36ಕ್ಕೆ 4) ಅವರು ಒಮನ್ ತಂಡದ ಬ್ಯಾಟಿಂಗ್‌ ಬೆನ್ನೆಲುಬು ಮುರಿದರು.

ಒಮನ್ ಬಿಗಿ ಬೌಲಿಂಗ್‌: ಆರಂಭದಿಂದಲೇ ಬಿಗಿ ದಾಳಿನಡೆಸಿ ಬಾಂಗ್ಲಾ ಬ್ಯಾಟ್ಸ್‌ಮನ್‌ಗಳಿಗೆ ಸವಾಲೊಡ್ಡಿದರು. ಬಾಂಗ್ಲಾ ತಂಡದ ಮೊಹಮ್ಮದ್ ನೈಮ್, ಶಕೀಬ್ ಅಲ್ ಹಸನ್ ಮತ್ತು ನಾಯಕ ಮೆಹಮುದುಲ್ಲಾ (17ರನ್) ಬಿಟ್ಟರೆ ಉಳಿದವರು ಒಂದಂಕಿ
ದಾಟಲಿಲ್ಲ.

3ನೇ ವಿಕೆಟ್ ಜೊತೆಯಾಟದಲ್ಲಿ ನೈಮ್ ಮತ್ತು ಶಕೀಬ್ ಸೇರಿಸಿದ 80 ರನ್‌ಗಳಿಂದಾಗಿ ತಂಡವು ಗೌರವಾರ್ಹ ಮೊತ್ತ ಗಳಿಸಲು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು:

ಬಾಂಗ್ಲಾದೇಶ: 20 ಓವರ್‌ಗಳಲ್ಲಿ 153 (ಮೊಹಮ್ಮದ್ ನೈಮ್ 64, ಶಕೀಬ್ ಅಲ್ ಹಸನ್ 42, ಮೆಹಮುದುಲ್ಲಾ 17, ಬಿಲಾಲ್ ಖಾನ್ 18ಕ್ಕೆ3, ಕಲೀಮುಲ್ಲಾ 30ಕ್ಕೆ2, ಫಯಾಜ್ ಭಟ್30ಕ್ಕೆ3).

ಒಮನ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 127 (ಜೀತೇಂದರ್ ಸಿಂಗ್‌ 40, ಕಶ್ಯಪ್ ಪ್ರಜಾಪತಿ 21, ಮೊಹಮ್ಮದ್ ನದೀಮ್‌ 14; ಮುಸ್ತಫಿಜುರ್ ರೆಹಮಾನ್‌ 36ಕ್ಕೆ 4, ಶಕೀಬ್ ಅಲ್ ಹಸನ್‌ 28ಕ್ಕೆ 3). ಫಲಿತಾಂಶ: ಬಾಂಗ್ಲಾದೇಶ ತಂಡಕ್ಕೆ 26 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.