ADVERTISEMENT

Asia Cup Rising Stars: ಶಾಹೀನ್ಸ್ ತಂಡಕ್ಕೆ ಮಣಿದ ಭಾರತ ಎ

ಪಿಟಿಐ
Published 16 ನವೆಂಬರ್ 2025, 19:40 IST
Last Updated 16 ನವೆಂಬರ್ 2025, 19:40 IST
<div class="paragraphs"><p>ಜಿತೇಶ್ ಶರ್ಮಾ&nbsp;</p></div>

ಜಿತೇಶ್ ಶರ್ಮಾ 

   

ದೋಹಾ: ಮಾಜ್ ಸದಾಕತ್ (ಔಟಾಗದೇ 79; 12ಕ್ಕೆ 2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಪಾಕಿಸ್ತಾನ ಶಾಹೀನ್ಸ್ ತಂಡವು ಭಾನುವಾರ ಏಷ್ಯಾ ಕಪ್ ರೈಸಿಂಗ್ ಸ್ಟಾರ್ ಕ್ರಿಕೆಟ್ ಟಿ20 ಟೂರ್ನಿಯ ಪಂದ್ಯದಲ್ಲಿ ಭಾರತ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಗೆದ್ದ ಶಾಹೀನ್ಸ್‌ ತಂಡವು ಫೀಲ್ಡಿಂಗ್‌ ಆಯ್ದುಕೊಂಡಿತು. ಬ್ಯಾಟಿಂಗ್‌ ಇಳಿದ ಭಾರತ ತಂಡವು ವೈಭವ್‌ ಸೂರ್ಯವಂಶಿ (45;28ಎ) ಅವರ ಬ್ಯಾಟಿಂಗ್‌ ನೆರವಿನಿಂದ 19 ಓವರ್‌ಗಳಲ್ಲಿ 136 ರನ್‌ ಗಳಿಸಿ ಆಲೌಟ್‌ ಆಯಿತು. ಸೂರ್ಯವಂಶಿ, ನಮನ್‌ ಧೀರ್‌ (35;20ಎ) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿಸಿದರು. ಶಾಹೀನ್ಸ್‌ ಇನ್ನೂ 40 ಎಸೆತ ಬಾಕಿ ಇರುವಂತೆ ಎರಡು ವಿಕೆಟ್‌ಗೆ 137 ರನ್‌ ಗಳಿಸಿ ಜಯ ಸಾಧಿಸಿತು. 

ADVERTISEMENT

ಸಂಕ್ಷಿಪ್ತ ಸ್ಕೋರ್‌:

ಭಾರತ ಎ: 19 ಓವರ್‌ಗಳಲ್ಲಿ 136 (ವೈಭವ್‌ ಸೂರ್ಯವಂಶಿ 45, ನಮನ್ ಧೀರ್‌ 35; ಶಾಹಿದ್ ಅಜೀಜ್ 24ಕ್ಕೆ 3, ಮಾಜ್ ಸದಾಕತ್ 12ಕ್ಕೆ 2). ಪಾಕಿಸ್ತಾನ ಶಾಹೀನ್ಸ್‌: 13.2 ಓವರ್‌ಗಳಲ್ಲಿ 2 ವಿಕೆಟ್‌ಗೆ 137 (ಮಾಜ್ ಸದಾಕತ್ ಔಟಾಗದೇ 79).

ಕೈಕುಲುಕದ ಆಟಗಾರರು:

ಉಭಯ ತಂಡಗಳ ಆಟಗಾರರು ಈ ಪಂದ್ಯದಲ್ಲೂ ಹಸ್ತಲಾಘವ ಮಾಡಲಿಲ್ಲ. ರಾಷ್ಟ್ರಗೀತೆ ಮುಗಿದ ನಂತರ ಬೇರೆ ಬೇರೆ ದಾರಿಗಳಲ್ಲಿ ಉಭಯ ತಂಡಗಳ ಆಟಗಾರರು ಡ್ರೆಸಿಂಗ್ ಕೋಣೆಗೆ ತೆರಳಿದರು. 

ಹೋದ ಸೆಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಆಡಿದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್  ಟಾಸ್ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ನಾಯಕ ಅಲಿ ಅಘಾ ಅವರ ಕೈಕುಲುಕಿರಲಿಲ್ಲ. ಪೆಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಭಾರತ ತಂಡದ ಸದಸ್ಯರು ಪಾಕ್ ಆಟಗಾರರ ಕೈಕುಲುಕಿರಲಿಲ್ಲ. ಭಾರತ ಎ ತಂಡದ ನಾಯಕ ಜಿತೇಶ್ ಶರ್ಮಾ ಅವರೂ ಸೂರ್ಯಕುಮಾರ್ ಹಾದಿಯನ್ನು ಅನುಸರಿಸಿದರು. ‍ಶಾಹೀನ್ಸ್ ನಾಯಕ ಇರ್ಫಾನ್ ಖಾನ್ ಅವರ ಕೈಕುಲುಕಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.