ಸಾಂದರ್ಭಿಕ ಚಿತ್ರ
ಲಾಹೋರ್: ರಸ್ತೆ ಅಪಘಾದಲ್ಲಿ ಪಾಕಿಸ್ತಾನ ಮಹಿಳಾ ಕ್ರಿಕೆಟ್‌ನ ಇಬ್ಬರು ಆಟಗಾರ್ತಿಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾನುವಾರ ತಿಳಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದ ಏಕದಿನ ಸರಣಿ ಅಂಗವಾಗಿ ಈ ತಿಂಗಳ ಆರಂಭದಲ್ಲಿ ಏರ್ಪಡಿಸಿದ್ದ ತರಬೇತಿ ಶಿಬಿರದಿಂದ ಆಟಗಾರರು ನಿಯಮ ಉಲ್ಲಂಘಿಸಿ ಹೊರ ಹೋಗಿದ್ದ ವೇಳೆ ಘಟನೆ ನಡೆದಿದೆ.
ರಾಷ್ಟ್ರೀಯ ಮಹಿಳಾ ತಂಡದ ಐದರಿಂದ ಆರು ಆಟಗಾರ್ತಿಯರು ಏಪ್ರಿಲ್ 2-8 ರ ಶಿಬಿರದ ಸಮಯದಲ್ಲಿ ತಂಡದ ವ್ಯವಸ್ಥಾಪಕರಿಗೆ ಮಾಹಿತಿ ನೀಡದೆ ಸಂಜೆ ಹೊತ್ತಿನಲ್ಲಿ ಹೊರಗೆ ಹೋಗಿದ್ದರು. ಆಗ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಇಬ್ಬರು ಆಟಗಾರ್ತಿಯರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
‘ಈ ಘಟನೆ ಮತ್ತು ಆಟಗಾರ್ತಿಯರ ವಿರುದ್ಧ ತೆಗೆದುಕೊಂಡ ಆಂತರಿಕ ಶಿಸ್ತು ಕ್ರಮವನ್ನು ಬಹಿರಂಗಪಡಿಸಿಲ್ಲ. ಅವರು ಮಾಡಿದ್ದು ತಪ್ಪು. ಇದರ ಪರಿಣಾಮವಾಗಿ ಈಗ ತಂಡದೊಂದಿಗೆ ದಿನದ 24 ಗಂಟೆಯೂ ಇರಲು ಹಿರಿಯ ಶ್ರೇಣಿಯ ಭದ್ರತಾ ಪೊಲೀಸ್ ಅಧಿಕಾರಿ ನೇಮಿಸಿದ್ದೇವೆ. ಪ್ರಮುಖ ಆಟಗಾರ್ತಿಯರಲ್ಲಿ ಒಬ್ಬರಾದ ಫಾತಿಮಾ ಸನಾ ಗಾಯಗೊಂಡಿದ್ದರು. ಆದ್ದರಿಂದ ಆವರು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರಿತ್ತು‘ ಎಂದು ಪಿಸಿಬಿ ಮೂಲಗಳು ತಿಳಿಸಿವೆ.
ಆ ಸರಣಿಯಲ್ಲಿ ಪಾಕಿಸ್ತಾನವು 0-3 ರಿಂದ ಸೋತಿತ್ತು. ಸನಾ ಅವರ ಗಾಯದ ಸ್ವರೂಪ ಅಥವಾ ಗಂಭೀರತೆಯನ್ನು ಅವರು ವಿವರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.