ಕ್ರಿಕೆಟ್
(ಸಾಂಕೇತಿಕ ಚಿತ್ರ)
ಅಕ್ಲೆಂಡ್ : ಆರಂಭ ಆಟಗಾರ ಹಸನ್ ನವಾಝ್ ಅವರ ಮಿಂಚಿನ ಶತಕದ (ಔಟಾಗದೇ 105, 45 ಎಸೆತ) ನೆರವಿನಿಂದ ಪಾಕಿಸ್ತಾನ ತಂಡ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 9 ವಿಕೆಟ್‌ಗಳಿಂದ ಸುಲಭವಾಗಿ ಸೋಲಿಸಿತು.
ಐದು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ 2–1ಕ್ಕೆ ಇಳಿಯಿತು. ಬ್ಯಾಟ್ ಮಾಡಲು ಕಳುಹಿಸಲ್ಪಟ್ಟ ನ್ಯೂಜಿಲೆಂಡ್ 19.5 ಓವರುಗಳಲ್ಲಿ 204 ರನ್ ಗಳಿಸಿತು. ಮಾರ್ಕ್ ಚಾಪ್‌ಮನ್ 44 ಎಸೆತಗಳಲ್ಲಿ 94 ರನ್ (4x11, 6x4) ಬಾರಿಸಿದರು.
ಉತ್ತರವಾಗಿ ಪ್ರವಾಸಿ ಪಾಕಿಸ್ತಾನ ತಂಡ 16 ಓವರುಗಳಲ್ಲಿ 1 ವಿಕೆಟ್‌ಗೆ 207 ರನ್ ಗಳಿಸಿ ಗೆಲುವು ಆಚರಿಸಿತು. ಹಸನ್ 10 ಬೌಂಡರಿ, ಏಳು ಸಿಕ್ಸರ್ ಬಾರಿಸಿ ಪಂದ್ಯದ ಆಟಗಾರ ಎನಿಸಿದರು. ಮೊದಲ ವಿಕೆಟ್‌ಗೆ 5.5 ಓವರುಗಳಲ್ಲಿ 74 ರನ್ ಸೇರಿಸಿದ ಅವರು, ಅಜೇಯ ಅರ್ಧ ಶತಕ ಬಾರಿಸಿದ ನಾಯಕ ಸಲ್ಮಾನ್ ಆಘಾ (ಔಟಾಗದೇ 51, 31ಎ, 4x6, 6x2) ಜೊತೆ ಮುರಿಯದ ಎರಡನೇ ವಿಕೆಟ್‌ಗೆ 133 ರನ್ ಸೇರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.