(ಚಿತ್ರ ಕೃಪೆ: X/@BLACKCAPS)
ಕ್ರೈಸ್ಟ್‌ಚರ್ಚ್, ನ್ಯೂಜಿಲೆಂಡ್: ಭಾನುವಾರ ನ್ಯೂಜಿಲೆಂಡ್ ಎದುರಿನ ಕೊನೆಯ ಟಿ20 ಪಂದ್ಯದಲ್ಲಿ ಇಫ್ತಿಕಾರ್ ಅಹಮದ್ ಪಾಕಿಸ್ತಾನ ತಂಡಕ್ಕೆ ಅಚ್ಚರಿಯ ಗೆಲುವಿನ ಕಾಣಿಕೆ ನೀಡಿದರು.
ಆಫ್‌ಬ್ರೇಕ್ ಬೌಲರ್ ಇಫ್ತಿಕಾರ್ ಕಳೆದ ಎಂಟು ಟಿ20 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರಲಿಲ್ಲ. ಆದರೆ ಇಲ್ಲಿ ಅವರು ಮೂರು ವಿಕೆಟ್ ಉರುಳಿಸಿ ಪಾಕ್ ತಂಡಕ್ಕೆ 42 ರನ್‌ಗಳ ಜಯ ತಂದುಕೊಟ್ಟರು. ಇದರಿಂದಾಗಿ ಐದು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿಕೊಳ್ಳುವ ಆತಿಥೇಯರ ಆಸೆ ಕಮರಿತು. ಕಿವೀಸ್ 4–1ರಿಂದ ಸರಣಿ ತನ್ನದಾಗಿಸಿಕೊಂಡಿತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ತಂಡವು 8 ವಿಕೆಟ್‌ಗಳಿಗೆ 134 ರನ್ ಗಳಿಸಿತು. ಈ ಸಾಧಾರಣ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಬಳಗವು 17.2 ಓವರ್‌ಗಳಲ್ಲಿ 92 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 134 (ಮೊಹಮ್ಮದ್ ರಿಜ್ವಾನ್ 38, ಫಕಾರ್ ಜಮಾನ್ 33, ಟಿಮ್ ಸೌಥಿ 19ಕ್ಕೆ2, ಮ್ಯಾಟ್ ಹೆನ್ರಿ 30ಕ್ಕೆ2, ಲಾಕಿ ಫರ್ಗ್ಯುಸನ್ 24ಕ್ಕೆ2, ಈಶ್ ಸೋಧಿ 22ಕ್ಕೆ2) ನ್ಯೂಜಿಲೆಂಡ್: 17.2 ಓವರ್‌ಗಳಲ್ಲಿ 92 (ಫಿನ್ ಅಲೆನ್ 22, ಗ್ಲೆನ್ ಫಿಲಿಪ್ಸ್ 26, ಶಾಹೀನ್ ಆಫ್ರಿದಿ 20ಕ್ಕೆ2, ಮೊಹಮ್ಮದ್ ನವಾಜ್ 18ಕ್ಕೆ2, ಇಫ್ತಿಕಾರ್ ಅಹಮದ್ 24ಕ್ಕೆ3) ಫಲಿತಾಂಶ: ಪಾಕಿಸ್ತಾನ ತಂಡಕ್ಕೆ 42 ರನ್‌ಗಳ ಜಯ. ಪಂದ್ಯಶ್ರೇಷ್ಠ: ಇಫ್ತಿಕಾರ್ ಅಹಮದ್. ಸರಣಿಶ್ರೇಷ್ಠ: ಫಿನ್ ಅಲೆನ್. ನ್ಯೂಜಿಲೆಂಡ್‌ಗೆ 4–1ರಿಂದ ಸರಣಿ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.