ADVERTISEMENT

ಕ್ರಿಕೆಟ್: ಇಂಗ್ಲೆಂಡ್–ಪಾಕ್ ಏಕದಿನ ಪಂದ್ಯ ಇಂದು

ಪಿಟಿಐ
Published 7 ಜುಲೈ 2021, 19:37 IST
Last Updated 7 ಜುಲೈ 2021, 19:37 IST
ಬಾಬರ್ ಆಜಂ
ಬಾಬರ್ ಆಜಂ   

ಕಾರ್ಡಿಫ್: ಕೊರೊನಾ ಸೋಂಕಿನ ಹಾವಳಿಯ ನಡುವೆಯೂ ಛಲ ಬಿಡದ ಇಂಗ್ಲೆಂಡ್ ತಂಡವು ಗುರುವಾರ ಆರಂಭವಾಗಲಿರುವ ಪಾಕಿಸ್ತಾನ ಎದುರಿನ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದೆ.

ಸೋಮವಾರ ರಾತ್ರಿ ಇಂಗ್ಲೆಂಡ್ ತಂಡದ ಏಳು ಜನರಿಗೆ ಕೋವಿಡ್ ಖಚಿತವಾಗಿದ್ದರಿಂದ ಇಡೀ ತಂಡವನ್ನೇ ಐಸೋಲೆಟ್ ಮಾಡಲಾಗಿತ್ತು. ಪಾಕ್ ಎದುರಿನ ಸರಣಿಗಾಗಿ ಬೆನ್ ಸ್ಟೋಕ್ಸ್‌ ನಾಯಕತ್ವದ ಹೊಸ ತಂಡವನ್ನು ರಚಿಸಲಾಗಿತ್ತು. ಅದೇ ತಂಡವು ಈಗ ಬಾಬರ್ ಆಜಂ ನಾಯಕತ್ವದ ಪಾಕ್ ಎದುರು ಆಡಲಿದೆ. ಸೋಫಿಯಾ ಗಾರ್ಡನ್ಸ್‌ನಲ್ಲಿ ಪಂದ್ಯ
ನಡೆಯಲಿದೆ.

ಪಂದ್ಯ ಆರಂಭ: ಸಂಜೆ 5.30

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.