ADVERTISEMENT

ಪಾಕಿಸ್ತಾನ ಅತ್ಯಂತ ಸುರಕ್ಷಿತ ಸ್ಥಳ: ಗೇಲ್‌

ಪಿಟಿಐ
Published 10 ಜನವರಿ 2020, 15:31 IST
Last Updated 10 ಜನವರಿ 2020, 15:31 IST
ಕ್ರಿಸ್‌ ಗೇಲ್‌
ಕ್ರಿಸ್‌ ಗೇಲ್‌   

ಢಾಕಾ: ‘ಪಾಕಿಸ್ತಾನವು ಸದ್ಯದ ಮಟ್ಟಿಗೆ ವಿಶ್ವದ ಅತ್ಯಂತ ಸುರಕ್ಷಿತ ಸ್ಥಳಗಳಲ್ಲೊಂದಾಗಿದೆ’ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟಿಗ ಕ್ರಿಸ್‌ ಗೇಲ್‌ ತಿಳಿಸಿದ್ದಾರೆ.

‘ಪಾಕಿಸ್ತಾನಕ್ಕೆ ಬರುವ ಆಟಗಾರರಿಗೆ ಬಿಗಿ ಭದ್ರತೆ ಒದಗಿಸಲು ಸಿದ್ಧವಿರುವುದಾಗಿ ಅಲ್ಲಿನ ಸರ್ಕಾರ ಹೇಳಿದೆ. ಹೀಗಾಗಿ ಆ ದೇಶಕ್ಕೆ ಹೋಗಿ ಕ್ರಿಕೆಟ್‌ ಆಡಲು ಭಯಪಡುವ ಅಗತ್ಯವಿಲ್ಲ. ಬಾಂಗ್ಲಾದೇಶದಲ್ಲೂ ನಿರ್ಭೀತಿಯಿಂದ ಕ್ರಿಕೆಟ್‌ ಆಡಬಹುದು’ ಎಂದಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್‌ ಗೇಲ್‌, ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ನಲ್ಲಿ (ಬಿಪಿಎಲ್‌) ಚಟ್ಟೊಗ್ರಮ್‌ ಚಾಲೆಂಜರ್ಸ್‌ ತಂಡದ ಪರ ಆಡುತ್ತಿದ್ದಾರೆ.

ADVERTISEMENT

2009ರಲ್ಲಿ ಲಾಹೋರ್‌ನ ಗಡಾಫಿ ಕ್ರೀಡಾಂಗಣದ ಬಳಿ ಶ್ರೀಲಂಕಾ ಆಟಗಾರರಿದ್ದ ಬಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಆ ಘಟನೆಯ ನಂತರ ಟೆಸ್ಟ್ ಆಡುವ ಎಲ್ಲಾ ರಾಷ್ಟ್ರಗಳೂ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಸರಣಿ ಆಡಲು ಹಿಂದೇಟು ಹಾಕಿದ್ದವು.

ಹೋದ ವರ್ಷದ ಅಂತ್ಯದಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಆತಿಥೇಯರ ವಿರುದ್ಧ ಏಕದಿನ, ಟ್ವೆಂಟಿ–20 ಮತ್ತು ಟೆಸ್ಟ್‌ ಸರಣಿಗಳನ್ನು ಆಡಿತ್ತು.

ಮೂರು ಪಂದ್ಯಗಳ ಟ್ವೆಂಟಿ–20 ಮತ್ತು ಎರಡು ಪಂದ್ಯಗಳ ಟೆಸ್ಟ್‌ ಸರಣಿಗಳನ್ನು ಆಡಲು ಪಾಕಿಸ್ತಾನಕ್ಕೆ ಬರುವಂತೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಈಗ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿಗೆ (ಬಿಸಿಬಿ) ಆಹ್ವಾನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.