ADVERTISEMENT

ಅಂಧರ ಕ್ರಿಕೆಟ್ ವಿಶ್ವಕಪ್: ಪಾಕ್‌ ತಂಡಕ್ಕೆ ವೀಸಾ ಶೀಘ್ರ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2022, 16:30 IST
Last Updated 1 ಡಿಸೆಂಬರ್ 2022, 16:30 IST

ನವದೆಹಲಿ: ಭಾರತದಲ್ಲಿ ಇದೇ 5 ರಿಂದ 17ರವರೆಗೆ ನಡೆಯಲಿರುವ ಅಂಧರ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲು ಪಾಕಿಸ್ತಾನ ತಂಡಕ್ಕೆ ಶೀಘ್ರದಲ್ಲಿಯೇ ವೀಸಾ ಲಭಿಸುವ ನಿರೀಕ್ಷೆ ಇದೆ.

ಭಾರತ ಮತ್ತು ಪಾಕ್ ತಂಡವು ಸಿರಿ ಫೋರ್ಟ್‌ ಮೈದಾನದಲ್ಲಿ ಮೊದಲ ಪಂದ್ಯ ಆಡಲಿವೆ. ಆದರೆ ವೀಸಾ ಇನ್ನೂ ಸಿಗದ ಕಾರಣ ಪಾಕ್ ತಂಡವು ಭಾರತಕ್ಕೆ ಬಂದಿಳಿಯುವುದು ವಿಳಂಬವಾಗಿದೆ.

‘ಪಾಕ್ ಕ್ರಿಕೆಟಿಗರಿಗೆ ವೀಸಾ ಪಡೆಯುವುದು ಬಹಳ ಕ್ಲಿಷ್ಟವಾದ ಕಾರ್ಯವಾಗಿದೆ. ಎಂ.ಇ.ಎ ಈ ಕುರಿತು ಕಾರ್ಯನಿರ್ವಹಿಸುತ್ತಿದೆ. ಪಾಕ್ ತಂಡಕ್ಕೆ ವೀಸಾ ಸಿಗುವ ಭರವಸೆ ಇದೆ’ ಎಂದು ಭಾರತ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ) ಅಧ್ಯಕ್ಷ ಜಿ.ಕೆ. ಮಹಾಂತೇಶ್ ಗುರುವಾರ ತಿಳಿಸಿದ್ದಾರೆ.

ADVERTISEMENT

ಟೂರ್ನಿಯಲ್ಲಿ ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ಸ್ಪರ್ಧಿಸುತ್ತಿಲ್ಲ. ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶ ತಂಡಗಳು ಕಣಕ್ಕಿಳಿಯಲಿವೆ.

ಪಂದ್ಯಗಳು ಫರೀದಾಬಾದ್, ದೆಹಲಿ, ಮುಂಬೈ, ಇಂದೋರ್ ಮತ್ತು ಬೆಂಗಳೂರಿನಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.