ADVERTISEMENT

ಪಾಕ್ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯ: ಎಜಾಜ್‌ ಪಟೇಲ್‌– ಹೆನ್ರಿ ಮಿಂಚು

ಏಜೆನ್ಸೀಸ್
Published 4 ಜನವರಿ 2023, 4:29 IST
Last Updated 4 ಜನವರಿ 2023, 4:29 IST
ಮ್ಯಾಟ್ ಹೆನ್ರಿ– ಪಿಟಿಐ ಚಿತ್ರ
ಮ್ಯಾಟ್ ಹೆನ್ರಿ– ಪಿಟಿಐ ಚಿತ್ರ   

ಕರಾಚಿ: ಕೊನೆಯ ವಿಕೆಟ್‌ ಜೊತೆಯಾಟದಲ್ಲಿ ಮ್ಯಾಟ್‌ ಹೆನ್ರಿ ಮತ್ತು ಎಜಾಜ್ ಪಟೇಲ್ ಅವರು ಶತಕದ ಜೊತೆಯಾಟವಾಡಿದರು. ಇದರೊಂದಿಗೆ ನ್ಯೂಜಿಲೆಂಡ್‌ ತಂಡವು ಪಾಕಿಸ್ತಾನ ಎದುರಿನ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಉತ್ತಮ ಮೊತ್ತ ಪೇರಿಸಿತು.

ಕರಾಚಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಎರಡನೇ ದಿನವಾದ ಮಂಗಳವಾರ ಕಿವೀಸ್‌ 449 ರನ್‌ ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು. ಮೊದಲ ಇನಿಂಗ್ಸ್ ಆರಂಭಿಸಿರುವ ಪಾಕಿಸ್ತಾನ 3 ವಿಕೆಟ್‌ ಕಳೆದುಕೊಂಡು 154 ರನ್‌ ಗಳಿಸಿದೆ. ಫಾಲೊಆನ್‌ನಿಂದ ಪಾರಾಗಲು ಪಾಕಿಸ್ತಾನ ಇನ್ನೂ 96 ರನ್ ಗಳಿಸಬೇಕಿದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ನ್ಯೂಜಿಲೆಂಡ್‌: 131 ಓವರ್‌ಗಳಲ್ಲಿ 449 (ಟಾಮ್ ಲಥಾಮ್‌ 71, ಡೆವೊನ್ ಕಾನ್ವೆ 122, ಟಾಮ್ ಬ್ಲಂಡೆಲ್‌ 51, ಮ್ಯಾಟ್ ಹೆನ್ರಿ ಔಟಾಗದೆ 68, ಎಜಾಜ್ ಪಟೇಲ್‌ 35; ನಸೀಂ ಶಾ 71ಕ್ಕೆ 3, ಅಬ್ರಾರ್ ಅಹಮದ್‌ 149ಕ್ಕೆ 4, ಆಘಾ ಸಲ್ಮಾನ್‌ 75ಕ್ಕೆ 3). ಪಾಕಿಸ್ತಾನ: 47 ಓವರ್‌ಗಳಲ್ಲಿ 3 ವಿಕೆಟ್‌ಗೆ 154 (ಇಮಾಮ್ ಉಲ್ ಹಕ್‌ ಬ್ಯಾಟಿಂಗ್‌ 74, ಬಾಬರ್ ಆಜಂ 24, ಸೌದ್‌ ಶಕೀಲ್ ಬ್ಯಾಟಿಂಗ್‌ 13; ಮ್ಯಾಟ್ ಹೆನ್ರಿ 35ಕ್ಕೆ 1, ಎಜಾಜ್ 30ಕ್ಕೆ 1).

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.