ADVERTISEMENT

ಮತ್ತೊಂದು ಗೆಲುವಿನ ಮೇಲೆ ಪಾಂಡೆ ಬಳಗದ ಕಣ್ಣು

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2019, 15:25 IST
Last Updated 30 ಆಗಸ್ಟ್ 2019, 15:25 IST
ಯಜುವೇಂದ್ರ ಚಾಹಲ್
ಯಜುವೇಂದ್ರ ಚಾಹಲ್   

ತಿರುವನಂತಪುರ: ಮೊದಲ ಪಂದ್ಯ ಗೆದ್ದಿರುವ ಸಂತಸದಲ್ಲಿರುವ ಮನೀಷ್ ಪಾಂಡೆ ನಾಯಕತ್ವದ ಭಾರತ ‘ಎ’ ತಂಡವು ಇನ್ನೊಂದು ಹಣಾಹಣಿಗೆ ಸಿದ್ಧವಾಗಿದೆ.

ಶನಿವಾರ ಇಲ್ಲಿ ನಡೆಯಲಿರುವ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ‘ಎ’ ತಂಡವನ್ನು ಎದುರಿಸಲಿದೆ. ಮೊದಲ ಪಂದ್ಯದಲ್ಲಿ ಭಾರತವು 69 ರನ್‌ಗಳಿಂದ ಗೆದ್ದಿತ್ತು. ಅದರಲ್ಲಿ ಶಿವಂ ದುಬೆ (ಔಟಾಗದೆ 79) ಮತ್ತು ಅಕ್ಷರ್ ಪಟೇಲ್ (ಔಟಾಗದೆ 60) ಅರ್ಧಶತಕಗಳನ್ನು ಬಾರಿಸಿದ್ದರು. ಅವರಿಬ್ಬರಶತಕದ ಜೊತೆಯಾಟದಿಂದಾಗಿ ತಂಡವು ದೊಡ್ಡ ಮೊತ್ತ ಗಳಿಸಿತ್ತು.

ರೀಜಾ ಹೆನ್ರಿಕ್ಸ್‌ ಅವರ ಆಕರ್ಷಕ ಶತಕ ಮತ್ತು ಹೆನ್ರಿಚ್ ಕ್ಲಾಸನ್ ಅವರು ಅರ್ಧಶತಕ ಬಾರಿಸಿದರೂ ದಕ್ಷಿಣ ಆಫ್ರಿಕಾ ಎ ತಂಡಕ್ಕೆ ಜಯ ದಕ್ಕಲಿಲ್ಲ. ಅದಕ್ಕೆ ಕಾರಣವಾಗಿದ್ದು ಭಾರತದ ಲೆಗ್‌ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು. ಐದು ವಿಕೆಟ್ ಗಳಿಸಿದ ಚಾಹಲ್ ಮಿಂಚಿದ್ದರು.

ADVERTISEMENT

ಆದ್ದರಿಂದ ಪ್ರವಾಸಿ ತಂಡವು ಎರಡನೇ ಪಂದ್ಯದಲ್ಲಿ ಆತಿಥೇಯರಿಗೆ ತಿರುಗೇಟು ನೀಡುವ ಛಲದಲ್ಲಿದೆ. ಮಳೆ ಬರುವ ಸಾಧ್ಯತೆಯೂ ಇದೆ.

ತಂಡಗಳು

ಭಾರತ ‘ಎ’: ಮನೀಷ್ ಪಾಂಡೆ (ನಾಯಕ), ಇಶಾನ್ ಕಿಶನ್ (ವಿಕೆಟ್‌ಕೀಪರ್), ಋತುರಾಜ್ ಗಾಯಕವಾಡ್, ಶುಭಮನ್ ಗಿಲ್, ಅನ್ಮೋಲ್‌ಪ್ರೀತ್ ಸಿಂಗ್, ಕೃಣಾಲ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಯಜುವೇಂದ್ರ ಚಾಹಲ್, ಕೆ. ಖಲೀಲ್ ಅಹಮದ್, ರಿಕಿ ಭುಯ್, ವಿಜಯಶಂಕರ್, ಶಾರ್ದೂಲ್ ಠಾಕೂರ್, ನಿತೀಶ್ ರಾಣಾ.

ದಕ್ಷಿಣ ಆಫ್ರಿಕಾ ‘ಎ’: ತೆಂಬಾ ಬಾವುಮಾ (ನಾಯಕ), ಹೆನ್ರಿಚ್ ಕ್ಲಾಸೆನ್ (ವಿಕೆಟ್‌ಕೀಪರ್), ಜಾನೆಮನ್ ಮಲಾನ್, ರೀಜಾ ಹೆನ್ರಿಕ್ಸ್‌, ಮ್ಯಾಥ್ಯೂ ಬ್ರಿಜ್, ಖಾಯಾ ಜೊಂಡೊ, ಗಾರ್ಜ್ ಲಿಂಡೆ, ಜಾರ್ನ್‌ ಫಾರ್ಚೂನ್, ಬೇರನ್ ಹೆನ್ರಿಕ್ಸ್‌, ಜೂನಿಯರ್ ಡಾಲಾ, ಎನ್ರಿಚ್ ನೊರ್ಜೆ, ಜಿಹಾನ್ ಕ್ಲೋಟೆ, ತೀನಿಸ್ ಡೆ ಬ್ರಯನ್, ವಿಯಾನ್ ಮಲ್ಡರ್, ಸಿನೆತೆಂಬಾ ಕ್ವಿಶೈಲ್, ಲುಥೊ ಸಿಫಾನಿಯಾ.

ಪಂದ್ಯ ಆರಂಭ: ಬೆಳಿಗ್ಗೆ 9

ಸ್ಥಳ: ಗ್ರೀನ್‌ಫೀಲ್ಡ್‌ ಅಂತರರಾಷ್ಟ್ರೀಯ ಕ್ರೀಡಾಂಗಣ, ತಿರುವನಂತಪುರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.