ADVERTISEMENT

ಬ್ಯಾಟ್ಸ್‌ಮನ್‌ಗಳಿಗೆ ‘ವಿಘ್ನ’ ತರುವುದೇ ಸಂತಸ:ಪಂತ್

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2018, 20:30 IST
Last Updated 10 ಡಿಸೆಂಬರ್ 2018, 20:30 IST
ರಿಷಭ್ ಪಂತ್
ರಿಷಭ್ ಪಂತ್    

ಅಡಿಲೇಡ್‌: ‘ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಿಗೆ ತೊಂದರೆ ಮಾಡುವುದು ಎಂದರೆ ನನಗೆ ಎಲ್ಲಿಲ್ಲದ ಸಂತೋಷ. ಆಸ್ಟ್ರೇಲಿಯಾ ಎದುರಿನ ಪಂದ್ಯದ ಗೆಲುವಿನಲ್ಲಿ ‍ಪಾತ್ರ ವಹಿಸಲು ಸಾಧ್ಯವಾದುದರಲ್ಲಿ ಖುಷಿ ಇದೆ...’ -ಇಲ್ಲಿ ಮುಕ್ತಾಯಗೊಂಡ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದಲ್ಲಿ ಒಟ್ಟು 11 ಕ್ಯಾಚ್‌ ಪಡೆದು ದಾಖಲೆಯನ್ನು ಸರಿಗಟ್ಟಿದ ಭಾರತ ವಿಕೆಟ್ ಕೀಪರ್‌ ರಿಷಭ್ ಪಂತ್ ಸಂಭ್ರಮದಿಂದ ಆಡಿದ ಮಾತು ಇದು.

ಪಂದ್ಯದ ನಂತರ ಮಾತನಾಡಿದ ಅವರು ‘ತಂಡದ ಗೆಲುವಿನಲ್ಲಿ ನನ್ನದೂ ಪಾತ್ರ ಇದೆ ಎಂಬುದು ಖುಷಿಯ ವಿಷಯ. ಆಸ್ಟ್ರೇಲಿಯಾದ ಬಾಲಂಗೋಚಿಗಳು ದಿಟ್ಟ ಹೊರಾಟ ನಡೆಸಿದಾಗ ಆತಂಕ ಕಾಡಿತ್ತು.

ಆದರೆ ನಮ್ಮ ಬೌಲರ್‌ಗಳು ಛಲ ಬಿಡದೆ ಕಾದಾಡಿದರು’ ಎಂದು ಪಂತ್ ಹೇಳಿದರು.

ADVERTISEMENT

ಇಂಗ್ಲೆಂಡ್‌ನ ಜಾಕ್ ರಸೆಲ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಪಾಕಿಸ್ತಾನದ ವಿರುದ್ಧ 11 ಕ್ಯಾಚ್‌ಗಳನ್ನು ಪಡೆದಿದ್ದರು. ಸೋಮವಾರ ಮೊಹಮ್ಮದ್ ಶಮಿ ಅವರ ಬೌಲಿಂಗ್‌ನಲ್ಲಿ ಮಿಷೆಲ್ ಸ್ಟಾರ್ಕ್‌ ಅವರ ಕ್ಯಾಚ್ ಪಡೆದು ರಿಷಭ್ ಈ ದಾಖಲೆಯನ್ನು ಸರಿಗಟ್ಟಿದರು.

ಒಂದೇ ಪಂದ್ಯದಲ್ಲಿ ಹೆಚ್ಚು ಕ್ಯಾಚ್ ಪಡೆದ ಭಾರತದ ಏಕೈಕ ವಿಕೆಟ್ ಕೀಪರ್ ಎಂಬ ದಾಖಲೆಯನ್ನು ರಿಷಭ್ ತಮ್ಮದಾಗಿಸಿಕೊಂಡರು. ಅವರು 10 ಕ್ಯಾಚ್ ಪಡೆದಿದ್ದ ವೃದ್ಧಿಮಾನ್ ಸಹಾ ಅವರನ್ನು ಹಿಂದಿಕ್ಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.