ADVERTISEMENT

ಪಾಕ್‌ ತಂಡಕ್ಕೆ ಹೈ ಪರ್ಫಾರ್ಮೆನ್ಸ್‌ ಕೋಚ್‌ ಆಗಿ ಯಾಸಿರ್‌ ಅರಾಫತ್‌

ಪಿಟಿಐ
Published 25 ಡಿಸೆಂಬರ್ 2023, 16:18 IST
Last Updated 25 ಡಿಸೆಂಬರ್ 2023, 16:18 IST
ಯಾಸಿರ್‌ ಅರಾಫತ್‌
ಯಾಸಿರ್‌ ಅರಾಫತ್‌   

ಕರಾಚಿ: ಮಾಜಿ ಆಲ್‌ರೌಂಡರ್‌ ಯಾಸಿರ್‌ ಅರಾಫತ್‌ ಅವರನ್ನು ಮುಂದಿನ ತಿಂಗಳು ನಡೆಯುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಗೆ ಪಾಕಿಸ್ತಾನ ಕ್ರಿಕೆಟ್‌ ತಂಡಕ್ಕೆ ‘ಹೈ ಪರ್ಫಾರ್ಮೆನ್ಸ್‌ ’ ಕೋಚ್ ಆಗಿ ಪಾಕ್‌ ಕ್ರಿಕೆಟ್‌ ಮಂಡಳಿ ನೇಮಿಸಿದೆ.

ನ್ಯೂಜಿಲೆಂಡ್‌ನಲ್ಲಿ ನಡೆಯುವ ಟಿ20 ಸರಣಿಗೆ 17 ಸದಸ್ಯರ ಪಾಕ್‌ ತಂಡವನ್ನು ಈಗಾಗಲೇ ಪ್ರಕಟಿಸಲಾಗಿದೆ. ಈ ಸರಣಿಯು ಮುಂದಿನ ವರ್ಷ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಪಾಕ್‌ ಪಾಲಿಗೆ ಪೂರ್ವಸಿದ್ಧತೆಯಾಗಿದೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಗೆ ಪಾಕಿಸ್ತಾನ ತಂಡದ ಹೈ ಪರ್ಫಾರ್ಮೆನ್ಸ್‌  ಪ್ರದರ್ಶನದ ಕೋಚ್ ಆಗಿರುವ ಸೈಮನ್ ಹೆಲ್ಮಟ್ ಅವರ ಸ್ಥಾನಕ್ಕೆ ಯಾಸಿರ್ ಅವರನ್ನು ನೇಮಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಮೂರು ಟೆಸ್ಟ್‌ ಮತ್ತು 11 ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದ ಯಾಸಿರ್‌ ಅವರು, 2009ರ ಐಸಿಸಿ ಟಿ20 ವಿಶ್ವಕಪ್‌ ಗೆದ್ದ ಪಾಕ್‌ ತಂಡದ ಭಾಗವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.