ADVERTISEMENT

ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್‌ಗೆ 65 ರನ್‌ ಗೆಲುವು

ಫಿಲಿಪ್ಸ್‌ ಶತಕ, ಬೌಲ್ಟ್‌ ಬಿರುಗಾಳಿ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 13:32 IST
Last Updated 29 ಅಕ್ಟೋಬರ್ 2022, 13:32 IST
ಶತಕ ಗಳಿಸಿದ ಗ್ಲೆನ್‌ ಫಿಲಿಪ್ಸ್‌ ಸಂಭ್ರಮ –ಎಎಫ್‌ಪಿ ಚಿತ್ರ
ಶತಕ ಗಳಿಸಿದ ಗ್ಲೆನ್‌ ಫಿಲಿಪ್ಸ್‌ ಸಂಭ್ರಮ –ಎಎಫ್‌ಪಿ ಚಿತ್ರ   

ಸಿಡ್ನಿ (ಪಿಟಿಐ): ಮಧ್ಯಮ ಕ್ರಮಾಂಕದಲ್ಲಿ ಅಮೋಘ ಆಟವಾಡಿದ ಗ್ಲೆನ್ ಫಿಲಿಪ್ಸ್‌ ಗಳಿಸಿದ ಶತಕ ಮತ್ತು ಟ್ರೆಂಟ್‌ ಬೌಲ್ಟ್ (13ಕ್ಕೆ 4) ಅವರ ಮಾರಕ ಬೌಲಿಂಗ್‌ ನೆರವಿನಿಂದ ನ್ಯೂಜಿಲೆಂಡ್‌ ತಂಡದವರು ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ತಂಡವನ್ನು 65 ರನ್‌ಗಳಿಂದ ಮಣಿಸಿದರು.

ಶನಿವಾರ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 ರನ್ ಗಳಿಸಿದರೆ, ದಸುನ್‌ ಶನಕ ಬಳಗ 19.2 ಓವರ್‌ಗಳಲ್ಲಿ 102 ರನ್‌ಗಳಿಗೆ ಆಲೌಟಾಯಿತು.

ಟೂರ್ನಿಯಲ್ಲಿ ಎರಡನೇ ಗೆಲುವು ಪಡೆದ ಕೇನ್‌ ವಿಲಿಯಮ್ಸನ್‌ ನೇತೃತ್ವದ ತಂಡ ಸೆಮಿಫೈನಲ್‌ ಪ್ರವೇಶಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. ಮೂರು ಪಂದ್ಯಗಳಿಂದ ಐದು ಪಾಯಿಂಟ್ಸ್‌ ಹೊಂದಿರುವ ನ್ಯೂಜಿಲೆಂಡ್‌ ‘ಗುಂಪು 1’ ರಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿತು.

ADVERTISEMENT

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 167 (ಗ್ಲೆನ್‌ ಫಿಲಿಪ್ಸ್‌ 104, ಡೆರಿಲ್‌ ಮಿಚೆಲ್‌ 22, ಮಿಚೆಲ್‌ ಸ್ಯಾಂಟ್ನರ್‌ ಔಟಾಗದೆ 11, ಕಸುನ್‌ ರಜಿತಾ 23ಕ್ಕೆ 2, ಮಹೀಶ್‌ ತೀಕ್ಷಣ 35ಕ್ಕೆ 1, ಧನಂಜಯ ಡಿಸಿಲ್ವಾ 14ಕ್ಕೆ 1, ವಣಿಂದು ಹಸರಂಗ 22ಕ್ಕೆ 1)

ಶ್ರೀಲಂಕಾ 19.2 ಓವರ್‌ಗಳಲ್ಲಿ 102 (ಭಾನುಕ ರಾಜ‍ಪಕ್ಸ 34, ದಸುನ್‌ ಶನಕ 35, ಟ್ರೆಂಟ್ ಬೌಲ್ಟ್‌ 13ಕ್ಕೆ 4, ಮಿಚೆಲ್‌ ಸ್ಯಾಂಟ್ನರ್‌ 21ಕ್ಕೆ 2, ಈಶ್ ಸೋಧಿ 21ಕ್ಕೆ 2) ಫಲಿತಾಂಶ: ನ್ಯೂಜಿಲೆಂಡ್‌ಗೆ 65 ರನ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.