ADVERTISEMENT

ಬೆನ್–ಜ್ಯಾಕ್ ಶತಕದ ಸೊಬಗು: ಅಭ್ಯಾಸ ಪಂದ್ಯ ಡ್ರಾ

ಶಮಿಗೆ ಎರಡು ವಿಕೆಟ್

ಪಿಟಿಐ
Published 13 ಡಿಸೆಂಬರ್ 2020, 19:26 IST
Last Updated 13 ಡಿಸೆಂಬರ್ 2020, 19:26 IST
ಜ್ಯಾಕ್ ವೈಲ್ಡರ್‌ಮುತ್  –ಟ್ವಿಟರ್ ಚಿತ್ರ
ಜ್ಯಾಕ್ ವೈಲ್ಡರ್‌ಮುತ್  –ಟ್ವಿಟರ್ ಚಿತ್ರ   

ಸಿಡ್ನಿ: ಪಿಂಕ್ಬಾಲ್ ಅಭ್ಯಾಸ ಪಂದ್ಯದಲ್ಲಿ ಜಯ ಸಾಧಿಸುವ ಭಾರತ ತಂಡದ ಆಸೆಗೆ ಆಸ್ಟ್ರೇಲಿಯಾ ಎ ತಂಡದ ಬೆನ್ ಮ್ಯಾಕ್‌ಡರ್ಮಾಟ್ ಮತ್ತು ಜ್ಯಾಕ್ ವೈಲ್ಡರ್‌ಮುತ್ ಅಡ್ಡಿಯಾದರು.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಮುಕ್ತಾಯವಾದ ಅಭ್ಯಾಸ ಪಂದ್ಯವು ಡ್ರಾ ಆಯಿತು.

ಶನಿವಾರ ಹನುಮವಿಹಾರಿ ಮತ್ತು ರಿಷಭ್ ಪಂತ್ ಅವರ ಶತಕಗಳ ನೆರವಿನಿಂದ ಭಾರತವು 472 ರನ್‌ಗಳ ಗೆಲುವಿನ ಗುರಿಯನ್ನು ನೀಡಿತ್ತು. ಕೊನೆಯ ದಿನದಾಟದ ಬೆಳಿಗ್ಗೆ ಬೌಲರ್‌ಗಳು ಉತ್ತಮ ಆರಂಭ ಮಾಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಆಡಿದ ಮ್ಯಾಕ್‌ ಡರ್ಮಾಟ್ (107; 167ಎಸೆತ) ಮತ್ತು ಜ್ಯಾಕ್ ವೈಲ್ಡರ್‌ಮುತ್ (111; 119ಎಸೆತ) ಅವರ ಆಟದಿಂದ ಆಸ್ಟ್ರೇಲಿಯಾ ಎ ಸೋಲು ತಪ್ಪಿಸಿಕೊಳ್ಳಲು ಸಾಧ್ಯವಾಯಿತು. ತಂಡವು 4 ವಿಕೆಟ್‌ಗಳಿಗೆ 307 ರನ್ ಗಳಿಸಿತು. ಅವರಿಬ್ಬರೂ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ 167 ರನ್ ಸೇರಿಸಿದರು.

ADVERTISEMENT

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಕ್ರೇಗ್ ಮ್ಯಾಕ್‌ಡರ್ಮಾಟ್ ಅವರ ಮಗ ಬೆನ್, ಅಲೆಕ್ಸ್‌ ಕ್ಯಾರಿ ಜೊತೆ ಉಪಯುಕ್ತ ಪಾಲುದಾರಿಕೆ ಆಟವಾಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 117 ರನ್‌ ಸೇರಿಸಿದರು. ಕ್ಯಾರಿ 111 ಎಸೆತಗಳಲ್ಲಿ 58 ರನ್‌ ಹೊಡೆದರು.

ಭಾರತದ ಮಧ್ಯಮವೇಗಿ ಮೊಹಮ್ಮದ್ ಶಮಿ ಎರಡು, ಮೊಹಮ್ಮದ್ ಸಿರಾಜ್ ಒಂದು ಮತ್ತು ಹನುಮವಿಹಾರಿ ಒಂದು ವಿಕೆಟ್ ಗಳಿಸಿದರು. ಮಯಂಕ್ ಅಗರವಾಲ್, ಪೃಥ್ವಿ ಶಾ ಕೂಡ ಬೌಲಿಂಗ್ ಮಾಡಿದರು. ಅದರೆ ವಿಕೆಟ್ ಗಳಿಸಲಿಲ್ಲ.

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ರವಿಶಾಸ್ತ್ರಿ ಅವರು ಇಡೀ ಪಂದ್ಯವನ್ನು ವೀಕ್ಷಿಸಿದರು. ಡಿಸೆಂಬರ್ 17ರಂದು ಅಡಿಲೇಡ್‌ನಲ್ಲಿ ಪಿಂಕ್ ಬಾಲ್ ಟೆಸ್ಟ್‌ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರು
ಮೊದಲ ಇನಿಂಗ್ಸ್
ಭಾರತ
194
ಆಸ್ಟ್ರೇಲಿಯಾ ಎ: 108

ಎರಡನೇ ಇನಿಂಗ್ಸ್
ಭಾರತ:
90 ಓವರ್‌ಗಳಲ್ಲಿ 4ಕ್ಕೆ386 ಡಿಕ್ಲೇರ್ಡ್
ಆಸ್ಟ್ರೇಲಿಯಾ ಎ: 75 ಓವರ್‌ಗಳಲ್ಲಿ 4ಕ್ಕೆ307 (ಬೆನ್ ಮ್ಯಾಕ್‌ಡರ್ಮಾಟ್ ಔಟಾಗದೆ 107, ಅಲೆಕ್ಸ್ ಕ್ಯಾರಿ 58, ಜ್ಯಾಕ್ ವೈಲ್ಡರ್‌ಮುತ್ ಔಟಾಗದೆ 111, ಮೊಹಮ್ಮದ್ ಶಮಿ 58ಕ್ಕೆ2)

ಫಲಿತಾಂಶ: ಡ್ರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.