ADVERTISEMENT

ವರ್ಷದಲ್ಲಿ 10 ತಿಂಗಳ ಆಟದಿಂದ ಗಾಯ: ಕಪಿಲ್ ದೇವ್

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2025, 14:23 IST
Last Updated 14 ಫೆಬ್ರುವರಿ 2025, 14:23 IST
<div class="paragraphs"><p>ಕೋಲ್ಕತ್ತದ ಟಾಲಿಗಂಜ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಾಟಾ ಸ್ಟೀಲ್ ಪ್ರೊಫೆಷನಲ್ ಗಾಲ್ಟ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾದ ಯುವರಾಜ್ ಸಂಧು ಅವರಿಗೆ ಕ್ರಿಕೆಟಿಗ ಕಪಿಲ್ ದೇವ್ ಟ್ರೋಫಿ ಪ್ರದಾನ ಮಾಡಿದರು&nbsp;</p></div>

ಕೋಲ್ಕತ್ತದ ಟಾಲಿಗಂಜ್ ಕ್ಲಬ್‌ನಲ್ಲಿ ಶುಕ್ರವಾರ ನಡೆದ ಟಾಟಾ ಸ್ಟೀಲ್ ಪ್ರೊಫೆಷನಲ್ ಗಾಲ್ಟ್ ಟೂರ್ ಆಫ್ ಇಂಡಿಯಾ (ಪಿಜಿಟಿಐ) ಚಾಂಪಿಯನ್‌ಷಿಪ್‌ನಲ್ಲಿ ವಿಜೇತರಾದ ಯುವರಾಜ್ ಸಂಧು ಅವರಿಗೆ ಕ್ರಿಕೆಟಿಗ ಕಪಿಲ್ ದೇವ್ ಟ್ರೋಫಿ ಪ್ರದಾನ ಮಾಡಿದರು 

   

–ಪಿಟಿಐ ಚಿತ್ರ

ಕೋಲ್ಕತ್ತ: ಕ್ರಿಕೆಟಿಗರು ವರ್ಷದ 10 ತಿಂಗಳೂ ಆಡುತ್ತಿದ್ದರೆ ಗಾಯಗೊಳ್ಳುವ ಸಾಧ್ಯತೆ ಸಹಜ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಕಳವಳ ವ್ಯಕ್ತಪಡಿಸಿದ್ದಾರೆ. 

ADVERTISEMENT

ಶುಕ್ರವಾರ ಇಲ್ಲಿ ನಡೆದ ಟಾಟ್ ಸ್ಟೀಲ್ ಗಾಲ್ಫ್ ಟೂರ್ನಿಯ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ನಂತರದ ಸಂವಾದದಲ್ಲಿ ಕಪಿಲ್ ಮಾತನಾಡಿದರು. 

ಜಸ್‌ಪ್ರೀತ್ ಬೂಮ್ರಾ ಅವರು ಗಾಯಗೊಂಡಿದ್ದು, ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಿಂದ ಹೊರಗುಳಿದಿರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ತಂಡದಲ್ಲಿ ಇಲ್ಲದಿರುವವರ ಬಗ್ಗೆ ಏಕೆ ಮಾತನಾಡುವುದು? ಇದು ತಂಡದ ಆಟ. ತಂಡವು ಜಯಸಬೇಕು. ಬ್ಯಾಡ್ಮಿಂಟನ್, ಟೆನಿಸ್ ಅಥವಾ ಗಾಲ್ಫ್‌ ರೀತಿಯಲ್ಲ ಇದು. ನಾವು ಸಂಘಟಿತವಾಗಿ ಆಡಿದಾಗ ಮಾತ್ರ ಜಯ ಖಚಿತ’ ಎಂದರು. 

‘ತಂಡದ ಪ್ರಮುಖ ಆಟಗಾರರು ಗಾಯಗೊಳ್ಳಬಾರದು ಎಂಬ ಆಶಯ ಎಲ್ಲರದ್ದು. ಆದರೆ ಅದು ಸಾಧ್ಯವಿಲ್ಲ. ಗಾಯಗೊಳ್ಳುವುದು ಸಹಜ. ಈ ವಿಷಯದಲ್ಲಿ ಏನೂ ಮಾಡಲಾಗದು. ಭಾರತ ತಂಡಕ್ಕೆ ಶುಭವಾಗಲಿ’ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ಹಾರೈಸಿದರು. 

‘ಇವತ್ತಿನ ಯುವ ಆಟಗಾರರಲ್ಲಿ ಅಪಾರ ಆತ್ಮವಿಶ್ವಾಸವಿದೆ. ನಾವು ಆಡುವಾಗ ಅಷ್ಟು ಆತ್ಮವಿಶ್ವಾಸ ನಮಗಿರಲಿಲ್ಲ. ಅವರೆಲ್ಲರಿಗೂ ಒಳ್ಳೆಯದಾಗಲಿ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.