ADVERTISEMENT

ಪ್ರಭುದೇವ್‌ಗೆ 228; ಡೈನಾಮೋಸ್‌ಗೆ 17!

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 17:52 IST
Last Updated 17 ನವೆಂಬರ್ 2018, 17:52 IST

ಬೆಂಗಳೂರು: ‍ಪ್ರಭುದೇವ್‌ (2 ಸಿಕ್ಸರ್‌, 38 ಬೌಂಡರಿ) 150 ಎಸೆತಗಳಲ್ಲಿ ಗಳಿಸಿದ 228 ರನ್‌ಗಳು ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್‌ ಕ್ಲಬ್‌ ತಂಡಕ್ಕೆ ಕೆಎಸ್‌ಸಿಎ ಗುಂಪು ಒಂದರ ಐದನೇ ಡಿವಿಷನ್ ಕ್ರಿಕೆಟ್ ಪಂದ್ಯದಲ್ಲಿ ಭಾರಿ ಜಯ ಗಳಿಸಿಕೊಟ್ಟವು.

ಶನಿವಾರ ನಡೆದ ಪಂದ್ಯದಲ್ಲಿ ಸರ್ಕಾರಿ ಕಲಾ ಕಾಲೇಜು ತಂಡವನ್ನು ಈ ತಂಡ 394 ರನ್‌ಗಳಿಂದ ಮಣಿಸಿತು. ಮತ್ತೊಂದು ಪಂದ್ಯದಲ್ಲಿ ಬೌಲರ್‌ಗಳು ಆಧಿಪತ್ಯ ಸ್ಥಾಪಿಸಿದರು. ಹಟನ್ಸ್ ಕ್ರಿಕೆಟ್ ಕ್ಲಬ್‌ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಡೈನಾಮೋಸ್‌ 17 ರನ್‌ಗಳಿಗೆ ಆಲೌಟಾಯಿತು.

ಸಂಕ್ಷಿಪ್ತ ಸ್ಕೋರು: ಬೆಂಗಳೂರು ಡೈನಾಮೋಸ್‌: 13.5 ಓವರ್‌ಗಳಲ್ಲಿ 17 (ಶಿವಾನಂದ 5ಕ್ಕೆ3, ದಿಲೀಪ್‌ 6ಕ್ಕೆ3);ಹಟನ್ಸ್ ಕ್ರಿಕೆಟ್ ಕ್ಲಬ್‌: 1.1 ಓವರ್‌ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 18. ಫಲಿತಾಂಶ: ಹಟನ್ಸ್ ಕ್ಲಬ್‌ಗೆ 10 ವಿಕೆಟ್‌ಗಳ ಜಯ. ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 6ಕ್ಕೆ 498 (ಪ್ರಭುದೇವ್‌ ಅಜೇಯ 228, ಸಂತೋಷ್ ಕುಮಾರ್‌ 153; ಪುನೀತ್‌ 101ಕ್ಕೆ2); ಸರ್ಕಾರಿ ಕಲಾ ಕಾಲೇಜು: 30.1 ಓವರ್‌ಗಳಲ್ಲಿ 104 (ದುರ್ಗಾ ಪ್ರಸಾದ್‌ 37; ಪ್ರದೀಪ್ ಕುಮಾರ್‌ 26ಕ್ಕೆ3, ಅರುಣ್‌ 22ಕ್ಕೆ5). ಫಲಿತಾಂಶ: ಬೆಂಗಳೂರು ಸ್ಪೋರ್ಟ್ಸ್ ಕ್ರಿಕೆಟ್ ಕ್ಲಬ್‌ಗೆ 349 ರನ್‌ಗಳ ಜಯ. ಹೆಡ್‌ಕ್ವಾರ್ಟರ್ಸ್ ಕ್ರಿಕೆಟ್ ಕ್ಲಬ್‌: 50 ಓವರ್‌ಗಳಲ್ಲಿ 220 (ಕಾರ್ತಿಕ್ ಪಿ 57, ಕಿರಣ್‌ ಜೆ 58; ಸಚಿನ್‌ 17ಕ್ಕೆ2, ಆಶಿಶ್‌ 45ಕ್ಕೆ2, ಪ್ರಜ್ವಲ್‌ 43ಕ್ಕೆ3, ರಾಹುಲ್‌ 40ಕ್ಕೆ2); ಎಸಿಇ ಕ್ರಿಕೆಟರ್ಸ್‌: 44 ಓವರ್‌ಗಳಲ್ಲಿ 9ಕ್ಕೆ 222 (ಸಚಿನ್‌ ಅಜೇಯ 117; ಅಮಿತ್‌ 30ಕ್ಕೆ3, ದಯಾನಂದ್‌ 35ಕ್ಕೆ3). ಫಲಿತಾಂಶ: ಎಸಿಇ ತಂಡಕ್ಕೆ ಒಂದು ವಿಕೆಟ್ ಜಯ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.