ADVERTISEMENT

ಸೌರಾಷ್ಟ್ರ ಪ್ರೀಮಿಯರ್ ಲೀಗ್‌ನಲ್ಲಿ ಚೇತೇಶ್ವರ ಪೂಜಾರ ಕಣಕ್ಕೆ

ಪಿಟಿಐ
Published 8 ಮೇ 2019, 19:09 IST
Last Updated 8 ಮೇ 2019, 19:09 IST
ಚೇತೇಶ್ವರ ಪೂಜಾರ
ಚೇತೇಶ್ವರ ಪೂಜಾರ   

ರಾಜ್‌ಕೋಟ್‌: ಭಾರತ ಟೆಸ್ಟ್‌ ತಂಡದ ಆಟಗಾರ ಚೇತೇಶ್ವರ ಪೂಜಾರ ಸೌರಾಷ್ಟ್ರ ಪ್ರೀಮಿಯರ್‌ ಲೀಗ್‌(ಎಸ್‌ಪಿಎಲ್‌) ಟ್ವೆಂಟಿ–20 ಟೂರ್ನಿಯಲ್ಲಿ ಬ್ಯಾಟ್‌ ಬೀಸಲಿದ್ದಾರೆ. ಲೀಗ್‌ನ ಚೊಚ್ಚಲ ಆವೃತ್ತಿ ಮೇ 14ರಂದು ಆರಂಭವಾಗಲಿದೆ.

ಟೂನಿಯಲ್ಲಿ ಪೂಜಾರ ಕಣಕ್ಕೆ ಇಳಿಯುವುದು ಖಚಿತ ಎಂದು ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ (ಎಸ್‌ಸಿಎ) ತಿಳಿಸಿದೆ. ಚೊಚ್ಚಲ ಲೀಗ್‌ನಲ್ಲಿ ಐದು ತಂಡಗಳು ಭಾಗವಹಿಸಲಿವೆ. ಪೂಜಾರ ಯಾವ ತಂಡ ಸೇರಿಕೊಳ್ಳಲಿದ್ದಾರೆ ಎಂಬುದು ಗುರುವಾರ ಗೊತ್ತಾಗಲಿದೆ ಎಂದು ಎಸ್‌ಸಿಎ ವಿವರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT