ADVERTISEMENT

CT: ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದ ರಚಿನ್ ರವೀಂದ್ರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಫೆಬ್ರುವರಿ 2025, 3:06 IST
Last Updated 25 ಫೆಬ್ರುವರಿ 2025, 3:06 IST
<div class="paragraphs"><p>ರಚಿನ್ ರವೀಂದ್ರ</p></div>

ರಚಿನ್ ರವೀಂದ್ರ

   

ಪಿಟಿಐ ಸಂಗ್ರಹ ಚಿತ್ರ

ರಾವಲ್ಪಿಂಡಿ: ಸೋಮವಾರ ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಚಾಂಪಿಯನ್ಸ್ ಟ್ರೋಫಿ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ನ್ಯೂಜಿಲೆಂಡ್ ಬ್ಯಾಟರ್ ರಚಿನ್ ರವೀಂದ್ರ ಅಪರೂಪದ ದಾಖಲೆ ಮಾಡಿದ್ದಾರೆ.

ADVERTISEMENT

ಗಾಯದಿಂದ ಚೇತರಿಸಿಕೊಂಡ ಬಳಿಕ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ ರಚಿನ್, ಕೇವಲ 105 ಎಸೆತಗಳಲ್ಲಿ 112 ರನ್ ಗಳಿಸಿ ಸಂಭ್ರಮಿಸಿದರು. ಈ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಬಾಂಗ್ಲಾದೇಶ ನೀಡಿದ್ದ 237 ರನ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 46.1 ಓವರ್‌ಗಳಲ್ಲಿ 5 ವಿಕೆಟ್ ಮಷ್ಟಕ್ಕೆ 240 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ಹೌದು, 2023ರ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಪದಾರ್ಪಣೆ ಪಂದ್ಯದಲ್ಲೇ ರಚಿನ್ ಶತಕ ಸಿಡಿಸಿದ್ದರು. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲೂ ರಚಿನ್ ಶತಕ ದಾಖಲಿಸಿದ್ದರು. ಈಗ ಚಾಂಪಿಯನ್ಸ್ ಟ್ರೋಫಿಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸುವ ಮೂಲಕ ಎರಡು ಐಸಿಸಿ ಪಂದ್ಯಾವಳಿಗಳ ಪದಾರ್ಪಣೆ ಪಂದ್ಯದಲ್ಲೂ ಸಾಧನೆ ಮಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವಿಶ್ವದ 19 ಬ್ಯಾಟರ್‌ಗಳು ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿದ್ದರೆ, 15 ಬ್ಯಾಟರ್‌ಗಳು ಚಾಂಪಿಯನ್ಸ್ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದಾರೆ. ರಚಿನ್ ರವೀಂದ್ರ ಮಾತ್ರ ಎರಡೂ ಐಸಿಸಿ ಪಂದ್ಯಾವಳಿಗಳಲ್ಲಿ ಪದಾರ್ಪಣೆ ಪಂದ್ಯದಲ್ಲಿ ಶತಕ ಗಳಿಸಿದ್ದಾರೆ.

ಏಕದಿನ ವಿಶ್ವಕಪ್‌ನ ಪದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದವರು..

* ಡೆನ್ನಿಸ್ ಅಮಿಸ್ (1975)

* ಗ್ಲೆನ್ ಟರ್ನರ್ (1975)

* ಅಲನ್ ಲ್ಯಾಂಬ್ (1983)

* ಟ್ರೆವರ್ ಚಾಪೆಲ್ (1983)

* ಜಿಯೋಫ್ ಮಾರ್ಷ್ (1987)

*ಆ್ಯಂಡಿ ಫ್ಲವರ್ (1992)

* ನಾಥನ್ ಆಸ್ಟಲ್ (1996)

* ಗ್ಯಾರಿ ಕರ್ಸ್ಟನ್ (1996)

* ಸ್ಕಾಟ್ ಸ್ಟ್ಐರಿಸ್ (2003

* ಕ್ರೇಗ್ ವಿಶಾರ್ಟ್ (2003)

* ಆ್ಯಂಡ್ರ್ಯೂ ಸೈಮಂಡ್ಸ್ (2003)

*ಜೆರೆಮಿ ಬ್ರೇ (2007)

* ವಿರಾಟ್ ಕೊಹ್ಲಿ(2011)

‌* ಆ್ಯರೋನ್ ಫಿಂಚ್ (2015)

* ಡೇವಿಡ್ ಮಿಲ್ಲರ್ (2015)

*ಡೆವೊನ್ ಕಾನ್ವೆ (2023)

* ರಚಿನ್ ರವೀಂದ್ರ (2023)

* ಅಬ್ದುಲ್ಲಾ ಶಫೀಕ್ (2023)

* ಟ್ರಾವಿಸ್ ಹೆಡ್ (2023)

ಚಾಂಪಿಯನ್ಸ್ ಟ್ರೋಫಿ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದವರು

* ಅಲಿಸ್ಟೈರ್ ಕ್ಯಾಂಪ್ಬೆಲ್ (1998)

* ಸಚಿನ್ ತೆಂಡೂಲ್ಕರ್ (1998)

* ಸಯೀದ್ ಅನ್ವರ್ (2000)

* ಅವಿಷ್ಕಾ ಗುಣವರ್ಧನೆ (2000)

* ಮೊಹಮ್ಮದ್ ಕೈಫ್ (2002)

* ಉಪುಲ್ ತರಂಗ (2006)

* ಶಿಖರ್ ಧವನ್ (2001)

* ತಮಿಮ್ ಇಕ್ಬಾಲ್(2017)

* ವಿಲ್ ಯಂಗ್(1015)

* ಟಾಮ್ ಲ್ಯಾಥಮ್ (2025)

* ತೌಹಿದ್ ಹೃದಯ್ (2025)

* ಶುಭಮನ್ ಗಿಲ್ (2025)

* ರಿಯಾನ್ ರಿಕೆಲ್ಟನ್ (2025)

* ಬೆನ್ ಡಕೆಟ್ (2025)*

* ರಚಿನ್ ರವೀಂದ್ರ (2025)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.