ADVERTISEMENT

ಕೌಂಟಿ ಕ್ರಿಕೆಟ್‌: ಸರೆ ತಂಡಕ್ಕೆ ಚಾಹರ್‌

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 0:04 IST
Last Updated 25 ಸೆಪ್ಟೆಂಬರ್ 2025, 0:04 IST
ರಾಹುಲ್‌ ಚಾಹರ‌್
ರಾಹುಲ್‌ ಚಾಹರ‌್   

ಲಂಡನ್‌: ಭಾರತದ ಲೆಗ್‌ ಸ್ಪಿನ್ನರ್‌ ರಾಹುಲ್‌ ಚಾಹರ‌್ ಅವರು ಇಂಗ್ಲಿಷ್ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಸರೆ ತಂಡದ ಪರ ಆಡಲಿದ್ದಾರೆ.

ಸರೆ ತಂಡವು ಈ ಋತುವಿನ ಕೊನೆಯ ಪಂದ್ಯವನ್ನು ಹ್ಯಾಂಪ್‌ಶೈರ್‌ ವಿರುದ್ಧ ಆಡಲಿದ್ದು, ಚಾಹರ್‌ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿರುವುದಾಗಿ ‘ಎಕ್ಸ್‌’ನಲ್ಲಿ ಹೇಳಿದೆ.

ಭಾರತದ ಮತ್ತೊಬ್ಬ ಆಟಗಾರ ವಾಷಿಂಗ್ಟನ್‌ ಸುಂದರ್‌ ಅವರು ಈ ಪಂದ್ಯದಲ್ಲಿ ಹ್ಯಾಂಪ್‌ಶೈರ್‌ ತಂಡದ ಪರ ಕಣಕ್ಕಿಳಿಯಲಿದ್ದಾರೆ.

ADVERTISEMENT

26 ವರ್ಷ ವಯಸ್ಸಿನ ಚಾಹರ್ ಅವರು ಭಾರತ ತಂಡದ ಪರ ಏಳು ಪಂದ್ಯಗಳಲ್ಲಿ ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.