ನವದೆಹಲಿ: ನನ್ನನ್ನು ನಾನೇ ಸಂಶಯದಿಂದ ನೋಡಿ ಕೊಳ್ಳಲು ಆರಂಭಿಸಿದ್ದೆ. ನನ್ನ ಚರಿತ್ರೆಯ ಕುರಿತು ಕೀಳರಿಮೆ ಮೂಡಿತ್ತು ಎಂದು ಕ್ರಿಕೆಟಿಗ ಕೆ.ಎಲ್ ರಾಹುಲ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ‘ಕಾಫಿ ವಿಥ್ ಕರಣ್’ ಟಿವಿ ಕಾರ್ಯಕ್ರಮದಲ್ಲಿ ಹಾರ್ದಿಕ್ ಪಾಂಡ್ಯ ಅವರೊಂದಿಗೆ ರಾಹುಲ್ ಅವರು ಹೆಣ್ಣುಮಕ್ಕಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಆರೋಪ ಎದುರಿಸಿದ್ದರು. ಆ ಘಟನೆಯ ನಂತರ ತಮ್ಮ ಜೀವನ ಹೇಗಿತ್ತು ಎಂಬು ದನ್ನು ರಾಹುಲ್ ಬುಧವಾರ ‘ಇಂಡಿಯಾ ಟುಡೆ’ ಸಂದರ್ಶನದಲ್ಲಿ ಬಿಚ್ಚಿಟ್ಟರು.
‘ಯಾವಾಗಲೂ ಜನರಿಂದ ಪ್ರೀತಿ, ಅಭಿಮಾನ ಪಡೆದ ರೂಢಿಯಿದ್ದ ನನಗೆ ಕಾಫಿ ಕಾರ್ಯಕ್ರಮದ ನಂತರ ಜನರಿಂದ ಟೀಕೆ, ಅನಾದರ ಅನುಭವಿಸಬೇಕಾಯಿತು. ಅದನ್ನು ಅರಗಿಸಿಕೊಳ್ಳುವುದು ಕಷ್ಟವಾಯಿತು. ಮಾಧ್ಯಮಗಳಲ್ಲಿ ನಮ್ಮ ಬಗ್ಗೆ ಬಹಳಷ್ಟು ಕೆಟ್ಟದನ್ನು ಬರೆದಾಗ, ನಮ್ಮ ಮೇಲೆಯೇ ಅನುಮಾನ ಕಾಡತೊಡಗಿತ್ತು’ ಎಂದರು.
‘ಮನೆಯಿಂದ ಹೊರಗೆ ಕಾಲಿಡಲೂ ಭಯಪಡುತ್ತಿದ್ದೆ. ಎದುರಿಗೆ ಸಿಕ್ಕಿದವರು ಏನು ಕೇಳಿಬಿಡುತ್ತಾರೋ ಎಂಬ ಆತಂ ಕವಿತ್ತು. ಏಕೆಂದರೆ ಅವರಿಗೆ ಏನು ಉತ್ತರಿಸಬೇಕು ಎಂಬುದು ತಿಳಿದಿರಲಿಲ್ಲ. ಅಭ್ಯಾಸಕ್ಕೆ ಹೋಗುತ್ತಿದ್ದೆ. ಮರಳಿ ಬಂದು ಪ್ಲೇ ಸ್ಟೇಷನ್ ನಲ್ಲಿ ಗೇಮ್ ಆಡುತ್ತ ಕಾಲ ಕಳೆಯುತ್ತಿದ್ದೆ’ ಎಂದರು.
ಖ್ಯಾತಿ ಮತ್ತು ಹಣದ ಹಿಂದೆಯೇ ಬರುವ ಕೆಲವು ಸವಾಲುಗಳು ಜೀವನದ ದಿಕ್ಕು ಬದಲಿಸುತ್ತವೆಯೇ? ಎಂಬ ಮಾತಿಗೆ ರಾಹುಲ್ ಸಮ್ಮತಿಸಿದರು.
‘ದೇಶಕ್ಕಾಗಿ ಆಡುವ ಅವಕಾಶ ಸಿಕ್ಕಾಗ ಬಹಳಷ್ಟು ಅಡೆತಡೆಗಳು ಇರು ತ್ತವೆ. ಯಾವಾಗಲೂ ಪ್ರಯಾಣದಲ್ಲಿಯೇ ಹೆಚ್ಚು ಸಮಯ ಕಳೆಯಬೇಕು. ಅದರಿಂದಾಗಿ ಕುಟುಂಬ, ಸ್ನೇಹಿತರಿಂದ ಸಂಪರ್ಕ ಕಡಿಮೆಯಾಗುತ್ತದೆ. ನಾನು ಬಹಳ ದೀರ್ಘ ಕಾಲ ಪ್ರಯಾಣದಲ್ಲಿ ದ್ದೆ. ಹೆಚ್ಚು ವಿಶ್ರಾಂತಿ ಪಡೆದಿರಲಿಲ್ಲ. ಅದ ರಿಂದಾಗಿ ಭಾವನಾತ್ಮಕವಾಗಿ ಬಹಳಷ್ಟು ಬದಲಾವಣೆಗಳು ಆಗುತ್ತವೆ’ ಎಂದರು.
‘ಸಾಧನೆಯ ಭರಾಟೆಯಲ್ಲಿ ಕೆಲ ವೊಮ್ಮೆ ಕುಟುಂಬದ ಸದಸ್ಯರು ನಮ ಗಾಗಿ ಮಾಡಿದ ತ್ಯಾಗ, ನೀಡಿದ ಪ್ರೀತಿ ಮತ್ತು ಶ್ರಮವನ್ನು ಮರೆತುಬಿಡುತ್ತೇವೆ. ನಮ್ಮನ್ನು ನಿಜವಾಗಿ ಪ್ರೀತಿಸುವ ಅವರು ಕಷ್ಟಕಾಲದಲ್ಲಿ ನೆರವಿಗೆ ಸದಾ ಕೈಜೋಡಿಸಿದ್ದನ್ನೂ ಮರೆತಿರುತ್ತೇವೆ. ಆದರೆ, ಹೊಸ ಸ್ನೇಹಿತರಲ್ಲಿ ಸಂಬಂಧಗಳನ್ನು ಹುಡುಕುತ್ತೇವೆ’ ಎಂದು ರಾಹುಲ್ ಮಾರ್ಮಿಕವಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.