ADVERTISEMENT

ಇಂಗ್ಲೆಂಡ್‌ನ ಭಿನ್ನ ಪರಿಸ್ಥಿತಿಗೆ ಬೇಗ ಹೊಂದಿಕೊಳ್ಳಬೇಕು-ಕೆ.ಎಲ್‌.ರಾಹುಲ್‌

ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ ಅನಿಸಿಕೆ

ಪಿಟಿಐ
Published 4 ಜುಲೈ 2019, 14:05 IST
Last Updated 4 ಜುಲೈ 2019, 14:05 IST
ಕೆ.ಎಲ್‌.ರಾಹುಲ್‌
ಕೆ.ಎಲ್‌.ರಾಹುಲ್‌   

ಲಂಡನ್‌: ‘ಇಂಗ್ಲೆಂಡ್‌ನ ವಿಭಿನ್ನ ಪರಿಸ್ಥಿತಿಗಳಿಗೆ ಬೇಗನೆ ಹೊಂದಿಕೊಂಡು ಬ್ಯಾಟಿಂಗ್‌ನಲ್ಲಿ ಸ್ಥಿರ ಸಾಮರ್ಥ್ಯ ತೋರಲು ಪ್ರಯತ್ನಿಸಬೇಕು’ ಎಂದು ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಕೆ.ಎಲ್‌.ರಾಹುಲ್‌ ಹೇಳಿದ್ದಾರೆ.

ರಾಹುಲ್‌ ಅವರು ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ 92 ಎಸೆತಗಳಲ್ಲಿ 77ರನ್‌ ದಾಖಲಿಸಿದ್ದರು. ಅವರು ಈ ಸಲದ ಟೂರ್ನಿಯಲ್ಲಿ ಬಾರಿಸಿದ ಎರಡನೇ ಅರ್ಧಶತಕ ಇದಾಗಿತ್ತು.

‘ಸೌಥಾಂಪ್ಟನ್‌, ಮ್ಯಾಂಚೆಸ್ಟರ್‌ ಮತ್ತು ಬರ್ಮಿಂಗ್‌ಹ್ಯಾಂನಲ್ಲಿ ನಿಧಾನಗತಿಯ ಪಿಚ್‌ಗಳಿದ್ದವು. ಆ ಅಂಗಳಗಳಲ್ಲಿ ಮೊದಲು ನಿಧಾನವಾಗಿ ಆಡಿ, ಆಟಕ್ಕೆ ಕುದುರಿಕೊಂಡ ನಂತರ ವೇಗವಾಗಿ ರನ್‌ ಗಳಿಸುವುದು ನನ್ನ ಯೋಜನೆಯಾಗಿತ್ತು. ಅದಕ್ಕನುಗುಣವಾಗಿಯೇ ಆಡಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ರೋಹಿತ್‌ ಶರ್ಮಾ ಅಮೋಘ ಲಯದಲ್ಲಿದ್ದಾರೆ. ಈಗಾಗಲೇ ನಾಲ್ಕು ಶತಕಗಳನ್ನು ದಾಖಲಿಸಿದ್ದಾರೆ. ಇಂಗ್ಲೆಂಡ್‌ನ ಪಿಚ್‌ಗಳಲ್ಲಿ ಅಬ್ಬರದ ಬ್ಯಾಟಿಂಗ್‌ ಮಾಡಲು ಅವರಿಂದ ಮಾತ್ರ ಸಾಧ್ಯ’ ಎಂದು ಬಿಸಿಸಿಐ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.