ADVERTISEMENT

ರಣಜಿ ಟ್ರೋಫಿ: ಒಂದೇ ಗುಂಪಿನಲ್ಲಿ ಕರ್ನಾಟಕ, ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 18 ಜೂನ್ 2023, 20:31 IST
Last Updated 18 ಜೂನ್ 2023, 20:31 IST
   

ಬೆಂಗಳೂರು: ದೇಶಿ ಕ್ರಿಕೆಟ್‌ನ ಕಟ್ಟಾ ಎದುರಾಳಿಗಳಾದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು 2023–24ರ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ  ಒಂದೇ ಗುಂಪಿನಲ್ಲಿ ಕಣಕ್ಕಿಳಿಯಲಿವೆ.

2024ರ ಜನವರಿ  5ರಿಂದ ಮಾರ್ಚ್ 14ರವರೆಗೆ ರಣಜಿ ಟ್ರೋಫಿ ಟೂರ್ನಿ ನಡೆಯಲಿದೆ.  ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಎಲೀಟ್‌ ವಿಭಾಗದ ಸಿ ಗುಂಪಿನಲ್ಲಿ ಆಡಲಿವೆ.

ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಕರ್ನಾಟಕವು ಇ ಗುಂಪಿನಲ್ಲಿ ಸ್ಪರ್ಧಿಸುವುದು. ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ  ಸಿ ಗುಂಪಿನಲ್ಲಿ ಆಡಲಿದೆ.

ADVERTISEMENT

ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಪ್ರಧಾನ ವ್ಯವಸ್ಥಾಪಕ ಅಬೇ ಕುರುವಿಲಾ  ಶನಿವಾರ ಸಂಜೆ ರಾಜ್ಯ ಸಂಸ್ಥೆಗಳಿಗೆ ಈ ಬಾರಿಯ ದೇಶಿ ಕ್ರಿಕೆಟ್ ಋತುವಿನ ಸಂಪೂರ್ಣ ವೇಳಾಪಟ್ಟಿಯನ್ನು ಕಳಿಸಿದೆ ಎಂದು ವಿಶ್ವಸನೀಯ ಮೂಲಗಳು ಖಚಿತಪಡಿಸಿವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.