ADVERTISEMENT

ರಾಜ್ಯ ತಂಡದಲ್ಲಿ ಮಯಂಕ್‌ಗೆ ಸ್ಥಾನ

​ಪ್ರಜಾವಾಣಿ ವಾರ್ತೆ
Published 21 ಜನವರಿ 2019, 16:13 IST
Last Updated 21 ಜನವರಿ 2019, 16:13 IST
ಭಾರತ ತಂಡದ ಆಟಗಾರ ಪೃಥ್ವಿ ಶಾ, ಕರ್ನಾಟಕದ ಪ್ರಸಿದ್ಧ ಎಂ.ಕೃಷ್ಣ (ಮಧ್ಯ) ಮತ್ತು ಮಯಂಕ್‌ ಅಗರವಾಲ್‌ ಅವರು ಬೆಂಗಳೂರಿನ ಎನ್‌ಸಿಎ ಮೈದಾನದಲ್ಲಿ ಸೋಮವಾರ ಅಭ್ಯಾಸದ ವೇಳೆ ಜೊತೆಯಾಗಿ ಕಾಣಿಸಿಕೊಂಡರು –ಪ್ರಜಾವಾಣಿ ಚಿತ್ರ
ಭಾರತ ತಂಡದ ಆಟಗಾರ ಪೃಥ್ವಿ ಶಾ, ಕರ್ನಾಟಕದ ಪ್ರಸಿದ್ಧ ಎಂ.ಕೃಷ್ಣ (ಮಧ್ಯ) ಮತ್ತು ಮಯಂಕ್‌ ಅಗರವಾಲ್‌ ಅವರು ಬೆಂಗಳೂರಿನ ಎನ್‌ಸಿಎ ಮೈದಾನದಲ್ಲಿ ಸೋಮವಾರ ಅಭ್ಯಾಸದ ವೇಳೆ ಜೊತೆಯಾಗಿ ಕಾಣಿಸಿಕೊಂಡರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಗಾಯದಿಂದ ಗುಣಮುಖರಾಗಿರುವ ಮಯಂಕ್‌ ಅಗರವಾಲ್‌, ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಸೌರಾಷ್ಟ್ರ ಎದುರಿನ ಸೆಮಿಫೈನಲ್‌ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಸೀನಿಯರ್‌ ಆಯ್ಕೆ ಸಮಿತಿ ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ಮನೀಷ್‌ ಪಾಂಡೆ ನಾಯಕರಾಗಿದ್ದು, ಶ್ರೇಯಸ್‌ ಗೋಪಾಲ್‌ ಉಪ ನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಸೆಮಿಫೈನಲ್‌ ಪಂದ್ಯ ಇದೇ 24ರಿಂದ 28ರವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ADVERTISEMENT

ತಂಡ ಇಂತಿದೆ: ಮನೀಷ್‌ ಪಾಂಡೆ (ನಾಯಕ), ಶ್ರೇಯಸ್‌ ಗೋಪಾಲ್‌ (ಉಪ ನಾಯಕ), ಆರ್‌.ವಿನಯ್‌ ಕುಮಾರ್‌, ಡಿ.ನಿಶ್ಚಲ್‌, ಮಯಂಕ್‌ ಅಗರವಾಲ್‌, ಕರುಣ್‌ ನಾಯರ್‌, ಆರ್‌.ಸಮರ್ಥ್‌, ಅಭಿಮನ್ಯು ಮಿಥುನ್‌, ರೋನಿತ್‌ ಮೋರೆ, ಕೆ.ಗೌತಮ್‌, ಪ್ರಸಿದ್ಧ ಎಂ.ಕೃಷ್ಣಾ, ಕೆ.ವಿ.ಸಿದ್ದಾರ್ಥ್‌, ಜೆ.ಸುಚಿತ್‌, ಬಿ.ಆರ್‌.ಶರತ್‌ ಮತ್ತು ಶರತ್‌ ಶ್ರೀನಿವಾಸ್‌ (ಇಬ್ಬರೂ ವಿಕೆಟ್‌ ಕೀಪರ್‌).

ಕೋಚ್‌: ಯರೇ ಗೌಡ, ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌, ಫೀಲ್ಡಿಂಗ್‌ ಕೋಚ್‌: ಶಬರೀಶ್‌ ಪಿ.ಮೋಹನ್‌, ಮ್ಯಾನೇಜರ್‌: ಅನುತೋಶ್‌ ಪಾಲ್‌, ಸ್ಟ್ರೆಂತ್‌ ಆ್ಯಂಡ್‌ ಕಂಡೀಷನಿಂಗ್‌ ಕೋಚ್‌: ರಕ್ಷಿತ್‌, ಫಿಸಿಯೊ: ಜಾಬಾ ಪ್ರಭು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.