ADVERTISEMENT

Ranji Trophy | ರಾಜ್ಯ ತಂಡಕ್ಕೆ ಮರಳಿದ ಕರುಣ್; ಮಯಾಂಕ್ ನಾಯಕ: ಹೀಗಿದೆ ತಂಡ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2025, 12:22 IST
Last Updated 6 ಅಕ್ಟೋಬರ್ 2025, 12:22 IST
ಕರುಣ್ ನಾಯರ್ 
ಕರುಣ್ ನಾಯರ್    

ಬೆಂಗಳೂರು: ಸೌರಾಷ್ಟ್ರ ವಿರುದ್ಧ ಅಕ್ಟೋಬರ್ 15 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿಯ ಮೊದಲ ಪಂದ್ಯಕ್ಕಾಗಿ15 ಆಟಗಾರರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ, ಕಳೆದ ಬಾರಿ ವಿದರ್ಭ ತಂಡದ ಪರ ಆಡಿದ್ದ ಕರುಣ್ ನಾಯರ್ ತವರು ತಂಡಕ್ಕೆ ವಾಪಸ್ಸಾಗಿದ್ದರೆ, ಮಯಾಂಕ್ ಅಗರ್ವಾಲ್ ನಾಯಕರಾಗಿ ಮುಂದುವರೆದಿದ್ದಾರೆ.

ಸೌರಾಷ್ಟ್ರ ವಿರುದ್ಧದ ಪಂದ್ಯಕ್ಕೆ 15 ಆಟಗಾರರ ಕರ್ನಾಟಕ ತಂಡ

ಮಯಾಂಕ್ ಅಗರವಾಲ್ (ನಾಯಕ), ಕರುಣ್ ನಾಯರ್, ಆರ್. ಸ್ಮರಣ್, ಕೆ.ಎಲ್ ಶ್ರೀಜಿತ್ (ವಿಕೆಟ್ ಕೀಪರ್), ಶ್ರೇಯಸ್ ಗೋಪಾಲ್, ವೈಶಾಕ್ ವಿಜಯಕುಮಾರ್, ವಿದ್ವತ್ ಕಾವೇರಪ್ಪ, ಅಭಿಲಾಷ್ ಶೆಟ್ಟಿ, ಎಂ. ವೆಂಕಟೇಶ್, ಎಸ್‌.ಜೆ. ನಿಖಿನ್ ಜೋಸ್, ಅಭಿನವ್ ಮನೋಹರ್, ಕೃತಿಕ್ ಕೃಷ್ಣ, ಕೆ.ವಿ ಅನೀಶ್, ಮೋಯ್ಸಿನ್ ಖಾನ್ ಹಾಗೂ ಶಿಖರ್ ಶೆಟ್ಟಿ ತಂಡದಲ್ಲಿದ್ದಾರೆ.

ADVERTISEMENT

ಕರ್ನಾಟಕ 2025–26ನೇ ಸಾಲಿನ ರಣಜಿ ಟ್ರೋಫಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಸೌರಾಷ್ಟ್ರ ತಂಡವನ್ನು ಇದೇ ಅಕ್ಟೋಬರ್ 15 ರಿಂದ 18 ರವರೆಗೆ ಎದರುರಿಸಲಿದೆ. ಈ ಪಂದ್ಯ ರಾಜ್‌ಕೋಟ್‌ನಲ್ಲಿ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.