ADVERTISEMENT

Ranji Trophy: ಮುನ್ನಡೆ ಪಡೆದ ತಮಿಳುನಾಡು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2024, 16:07 IST
Last Updated 24 ಫೆಬ್ರುವರಿ 2024, 16:07 IST
ಕ್ರಿಕೆಟ್‌
ಕ್ರಿಕೆಟ್‌   

ಕೊಯಮತ್ತೂರು: ನಾಯಕ ಸಾಯಿ ಕಿಶೋರ್ (60), ಬಾಬಾ ಇಂದ್ರಜಿತ್‌ (80) ಮತ್ತು ಭೂಪತಿ ಕುಮಾರ್ (65) ಅವರ ಅರ್ಧ ಶತಕಗಳ ನೆರವಿನಿಂದ ತಮಿಳುನಾಡು ತಂಡ, ಕೊಯಮತ್ತೂರಿನಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಕ್ವಾರ್ಟರ್‌ಫೈನಲ್ ಪಂದ್ಯದ ಎರಡನೇ ದಿನವಾದ ಶನಿವಾರ ಸೌರಾಷ್ಟ್ರ ವಿರುದ್ಧ 117 ರನ್‌ಗಳ ಮುನ್ನಡೆ ಪಡೆದಿದೆ. ಅದನ್ನು ಇನ್ನಷ್ಟು ವಿಸ್ತರಿಸುವ ಅವಕಾಶವನ್ನೂ ಹೊಂದಿದೆ.

ಸ್ಕೋರುಗಳು: ಮೊದಲ ಇನಿಂಗ್ಸ್: ಸೌರಾಷ್ಟ್ರ: 183; ತಮಿಳುನಾಡು: 100 ಓವರುಗಳಲ್ಲಿ 6 ವಿಕೆಟ್‌ಗೆ 300 (ಸಾಯಿ ಕಿಶೋರ್‌ 60, ಬಾಬಾ ಇಂದ್ರಜಿತ್‌ 80, ಭೂಪತಿ ಕುಮಾರ್‌ 65; ಪಾರ್ಥ ಭುಟ್‌ 76ಕ್ಕೆ2).

ಮುಷೀರ್‌ ದ್ವಿಶತಕ: ಇತ್ತೀಚಿನ ಯುವ ವಿಶ್ವಕಪ್‌ನಲ್ಲಿ ಮಿಂಚಿದ್ದ ಮುಷೀರ್ ಖಾನ್ ಅವರ ಅಜೇಯ ದ್ವಿಶತಕದ (203*, 357ಎ, 4x18) ನೆರವಿನಿಂದ ಮುಂಬೈ ತಂಡ ಇನ್ನೊಂದು ಕ್ವಾರ್ಟರ್‌ಫೈನಲ್‌ನಲ್ಲಿ ಶನಿವಾರ 383 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಬರೋಡ ಹೋರಾಟ ನಡೆಸುತ್ತಿದ್ದು ಎರಡನೇ ದಿನದಾಟ ಮುಗಿದಾಗ ಮೊದಲ ಇನಿಂಗ್ಸ್‌ನಲ್ಲಿ 2 ವಿಕೆಟ್‌ಗೆ 127 ರನ್ ಗಳಿಸಿತ್ತು.

ADVERTISEMENT

ಬರೋಡದ ಎಡಗೈ ಸ್ಪಿನ್ನರ್‌ ಭಾರ್ಗವ್ ಭಟ್‌ ಏಳು ವಿಕೆಟ್‌ ಪಡೆದು ಗಮನ ಸೆಳೆದರು.

ಸ್ಕೋರುಗಳು

ಮೊದಲ ಇನಿಂಗ್ಸ್‌: ಮುಂಬೈ: 383 (ಮುಷೀರ್‌ ಖಾನ್ ಔಟಾಗದೇ 203, ಹಾರ್ದಿಕ್ ತಮೋರೆ 57; ಭಾರ್ಗವ ಭಟ್‌ 112ಕ್ಕೆ7, ನಿನಾದ್‌ ರಾತ್ಯ 86ಕ್ಕೆ3); ಬರೋಡ: 35 ಓವರುಗಳಲ್ಲಿ 2 ವಿಕೆಟ್‌ಗೆ 127 (ಜ್ಯೋತ್ಸ್ನಿಲ್ ಸಿಂಗ್ 32, ಶಾಶ್ವತ್ ರಾವತ್ ಔಟಾಗದೇ 69).

ಮಧ್ಯಪ್ರದೇಶಕ್ಕೆ ಮುನ್ನಡೆ

ಇಂದೋರ್‌ನಲ್ಲಿ ನಡೆಯುತ್ತಿರುವ ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆತಿಥೇಯ ಮಧ್ಯಪ್ರದೇಶ, ಎರಡನೇ ದಿನ 62 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಪಡೆಯಿತು. ಎರಡನೇ ದಿನದಾಟ ಮುಗಿದಾಗ ಮಧ್ಯಪ್ರದೇಶ ವಿಕೆಟ್‌ ನಷ್ಟವಿಲ್ಲದೇ 21 ರನ್‌ ಗಳಿಸಿದ್ದು, ದಿನದ  ಕೊನೆಗೆ ಒಟ್ಟಾರೆ ಮುನ್ನಡೆಯನ್ನು 83 ರನ್ನಗಳಿಗೆ ವಿಸ್ತರಿಸಿದೆ.

ಸಂಕ್ಷಿಪ್ತ ಸ್ಕೋರು

ಮೊದಲ ಇನಿಂಗ್ಸ್‌: ಮಧ್ಯಪ್ರದೇಶ: 81.1 ಓವರುಗಳಲ್ಲಿ 234; ಆಂಧ್ರ: 68.3 ಓವರುಗಳಲ್ಲಿ 172 (ರಿಕಿ ಭುಯಿ 32, ಕರಣ್ ಸಿಂಧೆ 38; ಆವೇಶ್ ಖಾನ್ 33ಕ್ಕೆ2, ಅನುಭವ್ ಅಗರವಾಲ್ 33ಕ್ಕೆ3, ಕುಮಾರ್ ಕಾರ್ತಿಕೇಯ 41ಕ್ಕೆ3);

ಎರಡನೇ ಇನಿಂಗ್ಸ್‌: ಮಧ್ಯಪ್ರದೇಶ: 7 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 21.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.